ಬಂಟ್ವಾಳ: ವಿದ್ಯಾಭಾರತಿ ಕರ್ನಾಟಕ ವತಿಯಿಂದ ಆಯೋಜಿಸಲಾಗಿದ್ದ ಪ್ರಾಂತೀಯ ಕ್ರೀಡಾಕೂಟ 2026-27ರ ಅಂಗವಾಗಿ ಆ.29ರಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದ ಅಂಡರ್-14 ಬಾಲಕರ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಟೂರ್ನಮೆಂಟ್‌ನಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿ ಶೇಷ್ ನಂದ್ ಕಳ್ಳಿಗೆ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಶೇಷ್ ನಂದ್ ಅವರ ಸಾಧನೆಗೆ ಶಾಲಾ ಶಿಕ್ಷಕರು, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಶೇಷ್ ನಂದ್
ಅವರು ಬಂಟ್ವಾಳದ ಕಳ್ಳಿಗೆ ನಿವಾಸಿ, ಕೃಷಿಕೆ ಶುಭಾ ಬಂಜನ್ ಹಾಗೂ ಮಂಗಳೂರಿನ ಇಂಜಿನಿಯರ್ ಮತ್ತು ಸಾಹಿತಿ ಡಾ. ಆನಂದ್ ಬಂಜನ್ ಅವರ ಪುತ್ರ.













