ಬಿ ಸಿ ರೋಡ್ : ವಿಕಾಸಂ ಸೇವಾ ಫೌಂಡೇಶನ್ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ.

Coastal Bulletin
ಬಿ ಸಿ ರೋಡ್ : ವಿಕಾಸಂ ಸೇವಾ ಫೌಂಡೇಶನ್ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ  ಭಾಗವಹಿಸಿದ್ದ ಕಾಕುಂಜೆ ಸಾಫ್ಟ್ವೇರ್ ಕಂಪೆನಿ ಪ್ರೈವೇಟ್ ಲಿಮಿಟೆಡ್ ನ ಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರಾದ  ಗೋಪಾಲಕೃಷ್ಣ ಭಟ್ ಕಾಕುಂಜೆ ಮಾತನಾಡಿ "ಆಟಿಸಂ ನಂತಹ ಸಂಕೀರ್ಣವಾದ ದಿವ್ಯಾಂಗತೆಯುಳ್ಳ ವ್ಯಕ್ತಿಗಳಿಗೆ ಎಐಯನ್ನು ಬಳಸಿ ರೋಬೋಟ್ ಗಳ ಮೂಲಕ  ಥೆರಪಿಗಳನ್ನು ಕೊಡುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯು ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ವಿಕಾಸಂ ಸೇವಾ ಫೌಂಡೇಶನ್ ಜೊತೆಗೆ ಸಹಭಾಗಿತ್ವದಲ್ಲಿ ಈ ಸಂಶೋಧನೆಗಳನ್ನು ಮುಂದುವರಿಸುವ ಆಸಕ್ತಿಯನ್ನು ಹೊಂದಿದೆ" ಎಂದು ಹೇಳಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿ ರೊಟೇರಿಯನ್ ನಾರಾಯಣ ಪೆರ್ನೆ, ಹೋಟೆಲ್ ಮತ್ಸ್ಯ ಸಾಗರ್ ಇವರು ಮಾತನಾಡಿ  ವಿಕಾಸಂ ಸಂಸ್ಥೆಯ ಶಿಕ್ಷಕರು  ದಿವ್ಯಾಂಗರಿಗೆ ಸಲ್ಲಿಸುತ್ತಿದ್ದ ಸೇವೆಯನ್ನು ಶ್ಲಾಘಿಸಿದರು.

ಶಿಕ್ಷಣ ಇಲಾಖೆಯ ಬಿ ಆರ್ ಟಿ  ಸುರೇಖಾ " ಇಂದಿನ ಮೊಬೈಲ್ ಯುಗದಲ್ಲಿ ದಿವ್ಯಾಂಗರು ಮಾತ್ರವಲ್ಲದೆ ಸಾಮಾನ್ಯ ಮಕ್ಕಳ  ವರ್ತನೆಯನ್ನು ತಿದ್ದಲು ಆಕ್ಯುಪೇಶನ್ ಥೆರಪಿಯ ಅವಶ್ಯಕತೆ ಇದೆ" ಎಂದು ಹೇಳಿದರು.

ಪತ್ರಕರ್ತ ಹರೀಶ್  ಮಾಂಬಾಡಿ" ದಿವ್ಯಾಂಗ ಮಕ್ಕಳು ವಿಶೇಷ ಶಿಕ್ಷಕರ ಜೊತೆಗೆ ಆಪ್ತ ಭಾವವನ್ನು ಹೊಂದಿರುತ್ತಾತೆ. ಇಂತಹ ಆಪ್ತ ಭಾವವನ್ನು ಮೂಡಿಸುವ,  ಉಳಿಸಿಕೊಳ್ಳುವ ವಿಶೇಷ ಶಿಕ್ಷಕರ ಕೆಲಸ ಅತ್ಯಂತ ಪವಿತ್ರವಾದದ್ದು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಕಾಸಂ ಸೇವಾ ಫೌಂಡೇಶನ್ ನ ಸಹ ಸಂಸ್ಥಾಪಕರಾದ

ಗೋಪಾಲ್ ಗೋವಿಂತೋಟ ವಹಿಸದ್ದರು.

ಈ ಸಂದರ್ಭದಲ್ಲಿ ವಿಕಾಸಂ ಸೇವಾ ಫೌಂಡೇಶನ್ ನಲ್ಲಿ ಸೇವಸಲ್ಲಿಸಿದ್ದ ಹಿರಿಯ ಶಿಕ್ಷಕಿ ರೇಣುಕಾ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಇತರ ಎಲ್ಲಾ ವಿಶೇಷ ಶಿಕ್ಷಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿಕಾಸಂ ಸೇವಾ ಫೌಂಡೇಶನ್ ನ ಗಣೇಶ್ ಭಟ್ ವಿ ಅತಿಥಿಗಳನ್ನು ಸ್ವಾಗತಿಸಿದರು. ಎಂಎಸ್ ಡಬ್ಲ್ಯು ವಿದ್ಯಾರ್ಥಿ ಮೊಹಮ್ಮದ್ ಅಲಿ ವಂದಿಸಿದರು.  ಇನ್ನೋರ್ವ ಎಂಎಸ್ ಡಬ್ಲ್ಯು ವಿದ್ಯಾರ್ಥಿ ವಿತೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ವಾಕ್ ಶ್ರವಣ ತಜ್ಞರಾದ ಶೀಲಾ ತಿಲಕ್ ಇವರು ಹೆತ್ತವರಿಗಾಗಿ  " ದಿವ್ಯಾಂಗ ಮಕ್ಕಳಲ್ಲಿ ಸಂವಹನಾ ಕೌಶಲ್ಯವನ್ನು ಸುಧಾರಿಸುವ ತಂತ್ರಗಳ" ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಿದರು.

Leave a Comment