ತುಂಬೆ :ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Coastal Bulletin
ತುಂಬೆ :ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಂಟ್ವಾಳ :ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ. ತುಂಬೆ ಆಶ್ರಯದಲ್ಲಿ ನಡೆಯಲಿರುವ 26ನೇ ವರ್ಷದ ತುಂಬೆ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸೆ. 14ರಂದು ಶಾರದಾ ಸಮುದಾಯ ಭವನ ತುಂಬೆಯಲ್ಲಿ ನಡೆಯಿತು.

ಶ್ರೀ ಶಾರದಾ ಸೇವಾ ಪ್ರತಿಷ್ಠಾನ ತುಂಬೆ ಇದರ ಪ್ರಮುಖರು ಆಮಂತ್ರಣ ಪತ್ರಿಕೆಯನ್ನು 26ನೇ ವರ್ಷದ ಶ್ರೀ ಶಾರದಾ ರಜತ ಮಹೋತ್ಸವದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಉತ್ಸವ ಸಮಿತಿಯ ಸದಸ್ಯರಿಗೆ ಆಮಂತ್ರಣ ಪತ್ರಿಕೆ ಹಸ್ತಾತರಿಸಿದರು. ಈ ಸಂಧರ್ಭದಲ್ಲಿ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ,

ಪ್ರಧಾನ ಕಾರ್ಯದರ್ಶಿ ದಿವಾಕರ ಪೆರ್ಲಬೈಲು, ಕೋಶಾಧಿಕಾರಿ ರಾಘವ ಬಂಗೇರ ಪೆರ್ಲಬೈಲು, ತೇವು ತಾರಾನಾಥ ಕೊಟ್ಟಾರಿ ಸೇರಿದಂತೆ ಉತ್ಸವ ಸಮಿತಿ ಅಧ್ಯಕ್ಷರಾದ ಕಿಶೋರ್ ನಿಸರ್ಗ ದೇಮುಂಡೆ, ಪ್ರಧಾನ ಕಾರ್ಯದರ್ಶಿ ಜಗನ್ನಾಥ್ ಸಾಲಿಯಾನ್ ತುಂಬೆ, ಕೋಶಾಧಿಕಾರಿ ಸದಾನಂದ ಕೋಡಿಯಡ್ಕ, ಹಿರಿಯರಾದ ನೀಲಪ್ಪ ಸಾಲಿಯಾನ್, ವೇಣುಗೋಪಾಲ್ ಕೊಟ್ಟಾರಿ ತುಂಬೆ ಸೇರಿದಂತೆ ಕಾರ್ಯಕರ್ತರು ಮತ್ತಿತರರು ಉಪಸ್ಥಿರಿದ್ದರು.

Leave a Comment