ಬಂಟ್ವಾಳ :ಸರ್ ಎಂ ವಿಶ್ವೇಶ್ವರಯ್ಯ ಜನ್ಮ ದಿನವನ್ನು ದೇಶದ ಎಲ್ಲೆಡೆ ಸೆಪ್ಟೆಂಬರ್ 15 ರಂದು ಇಂಜಿನೀಯರ್ಸ್ ಡೇ ಎಂದು ಆಚರಿಸಲಾಗುವ ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಇಂಜಿನೀಯರ್ಸ್ ಡೇ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾದ ಇಂಜಿನೀಯರ್ ಪ್ರಕಾಶರವರ ಕಚೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಮಿತಿ ಗೌರವಾಧ್ಯಕ್ಷ ಇಂಜಿನೀಯರ್ ತಾರಾನಾಥ ಕೊಟ್ಟಾರಿ ಉದ್ಘಾಟಿಸಿ ಸರ್ ಎಂ ವಿ ಯವರ ಜೀವನ ಆದರ್ಶ ಕರ್ತತ್ವ ಶಕ್ತಿ ಕರ್ತವ್ಯ ಬದ್ಧತೆ ಯನ್ನು
ತಿಳಿಯಪಡಿಸಿ ಶುಭ ಹಾರೈಸಿದರು. ಇಂಜಿನೀಯರ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು,ಇಂಜಿನೀಯರ್ ಸುಧೀರ್ ಶೆಟ್ಟಿ ಸ್ವಾಗತಿಸಿ, ಇಂಜಿನೀಯರ್ ರಾಜೇಶ್ ವಂದಿಸಿದರು,ಇಂಜಿನೀಯರ್ ಸತೀಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು













