ತುಂಬೆ: ವಿಶ್ವ ಹಿಂದೂ ಪರಿಷತ್–ಬಜರಂಗ ದಳದಿಂದ 10ನೇ ವರ್ಷದ ಸ್ತಬ್ಧಚಿತ್ರ ಸಮರ್ಪಣೆ,

Coastal Bulletin
ತುಂಬೆ: ವಿಶ್ವ ಹಿಂದೂ ಪರಿಷತ್–ಬಜರಂಗ ದಳದಿಂದ 10ನೇ ವರ್ಷದ ಸ್ತಬ್ಧಚಿತ್ರ ಸಮರ್ಪಣೆ,

ಬಂಟ್ವಾಳ :ಫರಂಗಿಪೇಟೆ ಗಣೇಶೋತ್ಸವದ ಶೋಭಾಯಾತ್ರೆಯ ಅಂಗವಾಗಿ ತುಂಬೆ ವಿಶ್ವ ಹಿಂದೂ ಪರಿಷತ್–ಬಜರಂಗದಳದ ಹನುಮಾನ್ ಶಾಖೆಯ ವತಿಯಿಂದ ಸಿದ್ಧಪಡಿಸಲಾದ 10ನೇ ವರ್ಷದ ಸ್ತಬ್ಧಚಿತ್ರದ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಪ್ರತಿ ವರ್ಷದಂತೆ ಈ ಬಾರಿಯೂ ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗುವ ರೀತಿಯಲ್ಲಿ ಸ್ತಬ್ಧಚಿತ್ರವನ್ನು ಸಿದ್ಧಪಡಿಸಲಾಗಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂದೇಶವನ್ನು ಸಾರುವಂತೆ ರೂಪಿಸಲಾಗಿದೆ.10ನೇ ವರ್ಷದ ಸ್ತಬ್ಧಚಿತ್ರ ಸಮರ್ಪಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ವಿಶೇಷ ಸಂಭ್ರಮ ಮನೆಮಾಡಿತ್ತು.

ಸ್ತಬ್ಧಚಿತ್ರದ ಸಮರ್ಪಣಾ ಕಾರ್ಯಕ್ರಮದಲ್ಲಿ

ಹಿಂದೂ ಸಂಘಟನೆಯ ಮುಖಂಡರಾದ ಜ್ಯೋತಿಷಿ ಅನಿಲ್ ಪಂಡಿತ್,ವಕೀಲರಾದ ಪ್ರಸಾದ್ ಕುಮಾರ್ ,ಗಣೇಶ್ ಸುವರ್ಣ ತುಂಬೆ, ಸಂತೋಷ್ ಸರಪಾಡಿ,ಲೋಹಿತ್ ಪಣೋಲಿಬೈಲು, ಸೋಮಪ್ಪ ಪೂಜಾರಿ ಅಬ್ಬೆಟ್ಟು, ರಾಜೀವ ಗಣದಲಚ್ಚಿಲ್,ಪ್ರಶಾಂತ್ ಕೊಟ್ಟಾರಿ ತುಂಬೆ , ವಿಜೇತ್ ತುಂಬೆ ಸಹಿತ ಸಂಘಟನೆಯ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

Leave a Comment