ಬಿ.ಸಿ.ರೋಡ್: ಶ್ರೀ ರಾಮ ಗೆಳೆಯರ ಬಳಗದಿಂದ ಗಣಪತಿಗೆ ಬೃಹತ್ ಶೇಂಗಾ ಚಿಕ್ಕಿ ಹಾರ ಸಮರ್ಪಣೆ

Coastal Bulletin
ಬಿ.ಸಿ.ರೋಡ್: ಶ್ರೀ ರಾಮ ಗೆಳೆಯರ ಬಳಗದಿಂದ ಗಣಪತಿಗೆ ಬೃಹತ್ ಶೇಂಗಾ ಚಿಕ್ಕಿ ಹಾರ ಸಮರ್ಪಣೆ

ಬಂಟ್ವಾಳ: ಬಿ.ಸಿ.ರೋಡ್ ಶ್ರೀ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಡುತ್ತಿರುವ 47ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಭಕ್ತಿ ಹಾಗೂ ಸಂಭ್ರಮದಿಂದ ನಡೆಯುತ್ತಿದ್ದು, ಶ್ರೀ ಗಣಪನಿಗೆ ಶ್ರೀ ರಾಮ ಗೆಳೆಯರ ಬಳಗ ಕೈಕಂಬ–ಬಿ.ಸಿ.ರೋಡ್ ವತಿಯಿಂದ ವಿಶೇಷವಾಗಿ ತಯಾರಿಸಲಾದ ಬೃಹತ್ ಗಾತ್ರದ ಶೇಂಗಾ ಚಿಕ್ಕಿ ಹಾರವನ್ನು ಸಮರ್ಪಿಸಲಾಯಿತು.

ಕೈಕಂಬ ಪೊಳಲಿ ದ್ವಾರದಿಂದ ಮೆರವಣಿಗೆಯ ಮೂಲಕ ಗಣೇಶೋತ್ಸವದ ವೇದಿಕೆಗೆ ಆಗಮಿಸಿದ ಗೆಳೆಯರ ಬಳಗದ ಸದಸ್ಯರು, ಭಕ್ತಿಪೂರ್ವಕವಾಗಿ ಬೃಹತ್ ಶೇಂಗಾ ಚಿಕ್ಕಿ ಹಾರವನ್ನು ಶ್ರೀ ಗಣಪನಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಗಣೇಶನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಶ್ರೀ ರಾಮ

ಗೆಳೆಯರ ಬಳಗದ ವತಿಯಿಂದ ಪ್ರತಿವರ್ಷವೂ ವಿವಿಧ ರೀತಿಯಲ್ಲಿ ಗಣೇಶೋತ್ಸವದಲ್ಲಿ ಪಾಲ್ಗೊಂಡು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಲಾಗುತ್ತಿದ್ದು, ಈ ಬಾರಿಯೂ ವಿಶಿಷ್ಟ ರೀತಿಯಲ್ಲಿ ಹಾರ ಸಮರ್ಪಿಸುವ ಮೂಲಕ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಸದಾಶಿವ ಕೈಕಂಬ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Comment