ಬಂಟ್ವಾಳ :ಶ್ರೀ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಪಾಣೆಮಂಗಳೂರು ಇದರ ಲಕ್ಕಿ ಸ್ಕೀಮ್ ನ 9ನೇ ಅವೃತಿಯ ಕೊನೆಯ ಡ್ರಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಲ್ಮಾ ಕಾಂಪ್ಲೆಕ್ಸ್ ಮಾಲೀಕರಾದ ಅಹ್ಮದ್ ಬಾವ, ಎಸ್ ಅರ್ ಫ್ಯಾನ್ಸಿಯ ಮಾಲಕಿ ಭಾರತಿ, ಭಾರತ್ ಪ್ಲೈ ವುಡ್ ಅಂಡ್ ಡೋರ್ ನ ಮಾಲಕ ಮುಸಿನ್, ಸುರೇಶ್ ಕುಲಾಲ್ ಮತ್ತು ಯಾದವ ಸುವರ್ಣ ಮತ್ತಿತರ ಗಣ್ಯರು ಜೊತೆಗಿದ್ದರು.
ಈ ಸಂದರ್ಭದಲ್ಲಿ 10ನೇ ಅವೃತಿಯ ಲಕ್ಕಿ ಸ್ಕೀಮ್ ಒಂದೇ ಬಾರಿ 2000ರೂ ಕಟ್ಟಿ ಲಕ್ಷಾಂತರ ರೂ ಬಹುಮಾನ ಗೆಲ್ಲುವ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಅತಿಥಿಗಳು ಗ್ರಾಹಕರಲ್ಲಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಬೆಳ್ತಂಗಡಿಯ ಬಡ ಕುಟುಂಬದ ಸುಮತಿಯವರಿಗೆ ಮನೆ ನಿರ್ಮಿಸಲು ರೂ 25 ಸಾವಿರದ ಚೆಕ್ ನ್ನು ಸಂಸ್ಥೆಯ
ಮಾಲಕ ಕರುಣಾಕರರವರು ಹಸ್ತಾಂತರಿಸಿ ಮಾತನಾಡಿ, ಸಂಸ್ಥೆಯ ಲಾಭಾಂಶ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಆಶಕ್ತರಿಗೆ ನೀಡುತಿದ್ದೇವೆ ಎಂದರು
ಸಂಸ್ಥೆಯಾ ಮಾಲಕಿ ಕರುಣಾಕರ ಸುಪ್ರಿತಾ ಎ ವಿ, ಕೇಶವ ವಗ್ಗ, ಜಮಾಲ್ ಗೂಡಿನಬಳಿ, ಕಿಶೋರ್ ನಂದವಾರ ಮತ್ತು ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ಥಿತರಿದ್ದರು. ಮಹೇಶ್ ಕುಲಾಲ್ ಕಡೆಶಿವಾಲ್ಯ ಕಾರ್ಯಕ್ರಮ ನಿರೂಪಿಸಿದರು.
















