ಬಂಟ್ವಾಳ: ತಾಲೂಕು ಕುಲಾಲ ಸಂಘದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ

Coastal Bulletin
ಬಂಟ್ವಾಳ: ತಾಲೂಕು ಕುಲಾಲ ಸಂಘದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ

ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ (ರಿ) ಮಯ್ಯರಬೈಲು ಬಿ. ಮೂಡ ಆಡಳಿತ ಕಛೇರಿ ಕುಲಾಲ ಸಮುದಾಯ ಭವನ ಪೊಸಳ್ಳಿ ಬಿ.ಸಿ.ರೋಡು ಇದರ 2026 ನೇ ಸಾಲಿಗೆ ಪ್ರತಿಭಾ ಪುರಸ್ಕಾರ ಪಡೆಯಲು ಬಂಟ್ವಾಳ ತಾಲೂಕಿನ ಕುಲಾಲ ಸಮಾಜದ 2025-2026 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ತರಗತಿಗಳಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ  ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇದೇ ಸಂದರ್ಭದಲ್ಲಿ   ಬಂಟ್ವಾಳ ತಾಲೂಕಿನ ಕುಲಾಲ ಸಮಾಜದ ತೀರಾ ಆರ್ಥಿಕ ಸಂಕಷ್ಟದಲ್ಲಿರುವ 80% ಮೇಲ್ಪಟ್ಟು ಅಂಕ ಗಳಿಸಿದವರಿಗೆ 5 ವರ್ಷಗಳಿಗೆ ನಿರಂತರ ವಿದ್ಯಾರ್ಥಿವೇತನವನ್ನು  ಸಹ ಕೊಡಲಾಗುವುದು.

ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹ ವಿದ್ಯಾರ್ಥಿ / ವಿದ್ಯಾರ್ಥಿನಿಯರು ತಮ್ಮ ಸ್ವ ಬರಹದ ವಿನಂತಿ ಪತ್ರ, 2025-2026 ನೇ ಸಾಲಿನ ಅಂಕ ಪಟ್ಟಿಯ ಪ್ರತಿ, 2026-2027ನೇ ಸಾಲಿನ ಶಾಲಾ ಧೃಡೀ ಕೃತ  ಕಲಿಕಾ ಪ್ರಮಾಣ ಪತ್ರ,ಆಧಾರ್ ಪ್ರತಿ, ರೇಷನ್ ಕಾರ್ಡ್ ಪ್ರತಿ,2 ಪಾಸ್ ಪೋರ್ಟ್ ಅಳತೆಯ

ಇತ್ತೀಚಿನ ಭಾವಚಿತ್ರ, ಮೊಬೈಲ್ ಸಂಖ್ಯೆಯನ್ನು ದಿನಾಂಕ:30/9/2026 ರ ಸಾಯಂಕಾಲದೊಳಗೆ ತಲುಪುವಂತೆ ಕುಲಾಲ ಸಮುದಾಯ ಭವನ ಪೊಸಳ್ಳಿ ಸಂಘದ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ತಲುಪಿಸಬೇಕಾಗಿ ಪ್ರಧಾನ ಕಾರ್ಯದರ್ಶಿಯವರ ಪ್ರಕಟಣೆ ತಿಳಿಸಿದೆ.

ಈ ಹಿಂದಿನ ಸಾಲಿಗೆ ಅಂದರೆ ಈಗಾಗಲೇ 2022,2023, 2024,2025 ರ ಸಾಲಿನಲ್ಲಿ ನಿರಂತರ ವಿದ್ಯಾರ್ಥಿ ವೇತನ ಪಡೆದಿರುವವರು ಸಹ 2026-27 ರ ಸಾಲಿನ ಶಾಲಾ ಮುಖ್ಯಸ್ಥರಿಂದ ದೃಢೀಕೃತ ಕಲಿಕಾ ಪ್ರಮಾಣಪತ್ರ ಹಾಗೂ ಅಂಕ ಪಟ್ಟಿಯನ್ನು ಸಲ್ಲಿಸಬೇಕಾಗಿ ಪ್ರಕಟಣೆ ತಿಳಿಸಿದೆ..

Leave a Comment