Coastal Bulletin

ನವದೆಹಲಿ : ದೇಶದ 14ನೇ ಉಪರಾಷ್ಟ್ರಪತಿಯಾಗಿ ರಾಜಸ್ಥಾನದ ರಾಜಕಾರಣಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ.

ಉಪರಾಷ್ಟ್ರಪತಿ ಸ್ಥಾನಕ್ಕೆ ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿದ್ದ ಕರ್ನಾಟಕದ ರಾಜಕಾರಣಿ ಮಾರ್ಗರೇಟ್ ಆಳ್ವಾ ಅವರನ್ನು ಸೋಲಿಸಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಜಗದೀಪ್‌ ಧನಕರ್‌ ಒಟ್ಟು 528 ಮತಗಳನ್ನು ಪಡೆದರೆ, ಆಳ್ವಾ 182 ಮತಗಳನ್ನು ಪಡೆದುಕೊಂಡಿದ್ದಾರೆ. ಈಗ ಇರುವ ಮಾಹಿತಿಯ ಪ್ರಕಾರ, ಶೇ.93ಕ್ಕಿಂತ ಹೆಚ್ಚಿನ ಮತ ಚಲಾವಣೆಯಾಗಿದೆ. ದೇಶದ ಸಂಸತ್ತು ರಾಜ್ಯಸಭೆ ಹಾಗೂ ಲೋಕಸಭೆ ಸೆರಿ ಒಟ್ಟು 788 ಸಂಸದರನ್ನು ಹೊಂದಿದೆ. ಮಾರ್ಗರೇಟ್‌ ಆಳ್ವಾ ಅವರನ್ನು

ಆಯ್ಕೆ ಮಾಡುವ ವೆಳೆ ಕಾಂಗ್ರೆಸ್‌ ತನ್ನ ಅಭಿಪ್ರಾಯವನ್ನು ಕೇಳಿಲ್ಲ ಎನ್ನುವ ಕಾರಣಕ್ಕಾಗಿ ಚುನಾವಣೆಯಲ್ಲಿ ಟಿಎಂಸಿ ಮತ ಹಾಕುವುದಿಲ್ಲ ಎಂದು ತಿಳಿಸಿತ್ತು. ಅದರಂತೆ ಟಿಎಂಸಿಯ 39 ಸಂಸದರು (23 ಲೋಕಸಭೆ, 16 ರಾಜ್ಯಸಭೆ) ಚುನಾವಣೆಯಯಲ್ಲಿ ಮತ ಹಾಕಿರಲಿಲ್ಲ. ಚುನಾವಣೆಯ ಮತ ಎಣಿಕೆ ಮಾಡುವ ಮುನ್ನವೇ ಜಗದೀಪ್‌ ಧನಕರ್‌ ಅವರ ಗೆಲುವು ನಿಶ್ಚಿತವಾಗಿತ್ತು. ಎರಡೂ ಸದನದಿಂದ ಬಿಜೆಪಿಯ ಎಲ್ಲಾ 394 ಸಂಸದರು ಮತ ಚಲಾವಣೆ ಮಾಡಿದ್ದ ಕಾರಣ, ಧನಕರ್‌ ಸುಲಭವಾಗಿ ಗೆಲುವು ಸಾಧಿಸಿದರು.

Leave a Comment