ಹಾರ್ಮುಜ್ ದಾಳಿಗೆ ಪ್ರತೀಕಾರ: ಇರಾನ್‌ನ 80ಕ್ಕೂ ಹೆಚ್ಚು ತಾಣಗಳ ಮೇಲೆ ಅಮೆರಿಕ ಭೀಕರ ಏರ್‌ಸ್ಟ್ರೈಕ್‌

Coastal Bulletin
ಹಾರ್ಮುಜ್ ದಾಳಿಗೆ ಪ್ರತೀಕಾರ: ಇರಾನ್‌ನ 80ಕ್ಕೂ ಹೆಚ್ಚು ತಾಣಗಳ ಮೇಲೆ ಅಮೆರಿಕ ಭೀಕರ ಏರ್‌ಸ್ಟ್ರೈಕ್‌

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ವಾಣಿಜ್ಯ ಹಡಗುಗಳ ಮೇಲೆ ಇರಾನ್ (Iran) ಪಡೆಗಳು ನಡೆಸಿದ ದಾಳಿಗೆ ಪ್ರತೀಕಾರವಾಗಿ, ಅಮೆರಿಕ (USA) ಮಿಲಿಟರಿ ಇರಾನ್‌ನ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ವಾಯುದಾಳಿಗಳನ್ನು(Air Strike) ಆರಂಭಿಸಿದೆ.

ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಅವರ ಅಂತ್ಯಕ್ರಿಯೆಯ ದಿನಗಳಂದೇ ಈ ಬೃಹತ್ ದಾಳಿ ನಡೆದಿರುವುದು ಜಾಗತಿಕವಾಗಿ ತೀವ್ರ ಆತಂಕ ಮೂಡಿಸಿದೆ.

ಈ ದಾಳಿಗೆ ಮುನ್ನವೇ ಅಮೆರಿಕವು ಇರಾನ್‌ಗೆ ತೈಲ ಮಾರಾಟ ಮಾಡಲು ನೀಡಿದ್ದ ವಿಶೇಷ ವಿನಾಯಿತಿಯನ್ನು (Oil Sanctions Waiver) ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆರ್ಥಿಕ ಹೊಡೆತ ನೀಡಿದೆ.

ಎಲ್ಲೆಲ್ಲಿ ದಾಳಿ?

ಅಮೆರಿಕದ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳು ಇರಾನ್‌ನ ದಕ್ಷಿಣ ಕರಾವಳಿ ಭಾಗಗಳನ್ನು ದ್ವಂಸಗೊಳಿಸುತ್ತಿದೆ. ಏರ್ ಡಿಫೆನ್ಸ್ ಸಿಸ್ಟಮ್ಸ್ (ವಾಯು ರಕ್ಷಣಾ ವ್ಯವಸ್ಥೆಗಳು), ಕರಾವಳಿ ಕಾವಲು ರಾಡಾರ್ ಕೇಂದ್ರಗಳು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ 60 ಕ್ಕೂ ಹೆಚ್ಚು ಸಣ್ಣ ಯುದ್ಧ ಬೋಟ್‌ಗಳು, ಡ್ರೋನ್ ಉಡಾವಣಾ ಕೇಂದ್ರಗಳು ಮತ್ತು ಆಂಟಿ-ಶಿಪ್ ಕ್ರೂಸ್ ಕ್ಷಿಪಣಿ ನೆಲೆಗಳು, ಬಂದರು ನಗರಗಳಾದ ಬಂದರ್ ಅಬ್ಬಾಸ್ ಮತ್ತು ಸಿರಿಕ್ ಮೇಲೆ ದಾಳಿ ನಡೆದಿದೆ

ಇರಾನ್ ನಮ್ಮ ಎಚ್ಚರಿಕೆಗಳನ್ನು ಕೇಳುತ್ತಿಲ್ಲ. ಹಾಗಾಗಿ ನಾವು ನಮ್ಮ ದಾಳಿಯ ತೀವ್ರತೆಯನ್ನು ಹೆಚ್ಚಿಸಿದ್ದೇವೆ. ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಮುಗ್ಧ ನಾಗರಿಕರಿರುವ ಹಡಗುಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿದರೆ ಇರಾನ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕದ

ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಟರ್ಕಿಯಲ್ಲಿ ನಡೆಯುತ್ತಿರುವ ನ್ಯಾಟೋ (NATO) ಶೃಂಗಸಭೆಯಲ್ಲಿದ್ದಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈ ದಾಳಿಯ ಯೋಜನೆಗೆ ಅನುಮೋದನೆ ನೀಡಿದ್ದಾರೆ ಎಂದು ವರದಿಗಳು ಖಚಿತಪಡಿಸಿವೆ. ಇರಾನ್ ವಿದೇಶಾಂಗ ಸಚಿವಾಲಯವು ಅಮೆರಿಕದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ತಕ್ಕ ಪ್ರತ್ಯುತ್ತರ ನೀಡುವುದಾಗಿ ಹೇಳಿದೆ. ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಮಾಹಿತಿ ಪ್ರಕಾರ, ಈ ಬಾರಿ ಇರಾನ್ ಒಳಗಿರುವ ಕನಿಷ್ಠ 80ಕ್ಕೂ ಹೆಚ್ಚು ಆಯಕಟ್ಟಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಇದು ಕಳೆದ ಜೂನ್‌ನಲ್ಲಿ ನಡೆದ ದಾಳಿಗಿಂತ 8 ಪಟ್ಟು ಹೆಚ್ಚು ತೀವ್ರ ಮತ್ತು ದೊಡ್ಡದಾಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ಯಾಕೆ?

ಇರಾನ್ ಇತ್ತೀಚೆಗೆ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಕತಾರ್, ಸೌದಿ ಅರೇಬಿಯಾ ಸೇರಿದಂತೆ ಮೂರು ಪ್ರಮುಖ ವಾಣಿಜ್ಯ ತೈಲ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿತ್ತು. ಇರಾನ್ ಮತ್ತು ಅಮೆರಿಕ ನಡುವೆ ಕಳೆದ ತಿಂಗಳಷ್ಟೇ ಏರ್ಪಟ್ಟಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವನ್ನು ಇರಾನ್ ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಅಮೆರಿಕ ಆರೋಪಿಸಿದೆ.

Leave a Comment