ಕೊಡ್ಮಾಣ್:ಅ.16-19, 38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಸಂಭ್ರಮ. ನಾಲ್ಕು ದಿನಗಳ ಕಾಲ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ವೈಭವ.

Coastal Bulletin
ಕೊಡ್ಮಾಣ್:ಅ.16-19, 38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಸಂಭ್ರಮ. ನಾಲ್ಕು ದಿನಗಳ ಕಾಲ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ವೈಭವ.

ಬಂಟ್ವಾಳ :ಶ್ರೀ ಶಾರದಾ ಪೂಜಾ ಸೇವಾ ವೇದಿಕೆ, ಕೊಡ್ಮಾಣ್ ಇದರ ಅಶ್ರಯದಲ್ಲಿ 38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು  ಅ.16ರಿಂದ 19ರ ವರೆಗೆ ಕೊಡ್ಮಾಣ್  ಶಾಲಾ ಶಾರದಾ ಮಂಟಪದಲ್ಲಿ ವೈದಿಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಲಿದೆ.

ಕಾರ್ಯಕ್ರಮದ ವಿವರ :

ಅ.16ರಂದು ಬೆಳಿಗ್ಗೆ  7ಕ್ಕೆ ಶ್ರೀ ಶಾರದಾ ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, ಮಹೋತ್ಸವದ ಉದ್ಘಾಟನೆ ಮತ್ತು ಧ್ವಜಾರೋಹಣಬೆಳಿಗ್ಗೆ 10.00ಕ್ಕೆ : ಗಣಪತಿ ಹೋಮ,ರಾತ್ರಿ 7.30ರಿಂದ : ಸಾಂಸ್ಕೃತಿಕ ಕಾರ್ಯಕ್ರಮ ಸರಕಾರಿ ಪ್ರೌಡಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ಕೊಡಮಣ್ಣುಇಲ್ಲಿನ ವಿದ್ಯಾರ್ಥಿಗಳಿಂದ.

ಅ.17ನೇ ಶನಿವಾರ ಬೆಳಿಗ್ಗೆ  9,000ಂದ : ಶ್ರೀಸೂಕ್ತಹೋಮ,ಮಧ್ಯಾಹ್ನ 12.00ಕ್ಕೆ : ಹೋಮದ ಪೂರ್ಣಾಹುತಿ,ಮಹಾಪೂಜೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ,ರಾತ್ರಿ 700ರಿಂದ : ಸ್ವಯಂವರ ಪಾರ್ವತೀ ಪೂಜೆ, ಅನ್ನಸಂತರ್ಪಣೆ,ರಾತ್ರಿ 7.30ರಿಂದ : ಸಾಂಸ್ಕೃತಿಕ ಕಾರ್ಯಕ್ರಮ,ತುಳುನಾಡ ವೈಭವ, ಅಮರ್ ಬೀರೆರ್ ಕೋಟಿ ಚೆನ್ನಾಯೆರ್,

ಅ 18ರಂದು ಬೆಳಿಗ್ಗೆ 8.30ರಿಂದ : ಚಂಡಿಕಾ ಯಾಗ ಬೆಳಗ್ಗೆ 11.00ಕ್ಕೆ : ಯಾಗದ ಪೂರ್ಣಾಹುತಿ, ಮಹಾಪೂಜೆ,ಮಧ್ಯಾಹ್ನ 12.30ಕ್ಕೆ : ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ,ರಾತ್ರಿ 7.00ರಿಂದ : ದುರ್ಗಾ ನಮಸ್ಕಾರ ಪೂಜೆ,ರಾತ್ರಿ 7.30ರಿಂದ : ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಕೂಟ ಕದ್ರಿ

ಇವರಿಂದ ಯಕ್ಷ ಗಾನ ಬಯಲಾಟ ಸುದರ್ಶನ ಗರ್ವಭಂಗ.

ಅ 19ರಂದು ಸೋಮವಾರ ಬೆಳಿಗ್ಗೆ 10.09ರಿಂದ : ಅಕ್ಷರಾರಂಭ ಪೂಜೆ ಬೆಳಿಗ್ಗೆ 10.30ರಿಂದ : ದುರ್ಗಾಹೋಮ ಬೆಳಗ್ಗೆ 11.30ರಿಂದ : ಆಯುಧ ಪೂಜೆ ಮಧ್ಯಾಹ್ನ 12.00ಕ್ಕೆ : ಪೂರ್ಣಾಹುತಿ ಶ್ರೀ ಶಾರದಾ ದೇವರಿಗೆ ಮಹಾಪೂಜೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಮಧ್ಯಾಹ್ನ 12.30ಕ್ಕೆ : ಸಾಂಸ್ಕೃತಿಕ ಕಾರ್ಯಕ್ರಮ ದಿವ್ಯನಿಧಿ ರೈ ಎರುಂಬು ಪ್ರಸ್ತುತ ಪಡಿಸುವ ಸ್ವರ ಸಮರ್ಪಣೆ-ಸಂಗೀತ ಕಾರ್ಯಕ್ರಮ,ಅಪರಾಹ್ನ 3.00ಕ್ಕೆ: ವಿಸರ್ಜನೋತ್ಸವ, ಮಹಾಮಂಗಳಾರತಿ, ಪ್ರಸಾದ ವಿತರಣೆ

ರಾತ್ರಿ ಗಂಟೆ 7.30ಕ್ಕೆ: ವಿಸರ್ಜನಾ ಪೂಜೆ ಧನ್ಯವಾದ ಸಮರ್ಪಣೆ, ಪ್ರಸಾದ ವಿತರಣೆ ಬಳಿಕ ಏಪದಗುಳಿ ಆಪ್ಪಯ್ಯ ಮೂಲ್ಯರ ಮನೆತನದ ದೇವರಕೆರೆಯಲ್ಲಿ ಶ್ರೀ ಶಾರದಾ ವಿಗ್ರಹದ ಜಲಸ್ತಂಭನವಾಗುವುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಅ. 15ರಂದು ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಕೊಡ್ಮಾಣ್ ಮದಕ ಶ್ರೀ ಕೃಷ್ಣ ಕಟ್ಟೆ ಬಳಿಯಿಂದ ಹೊರಡಲಿದೆ.

-

Leave a Comment