ಮೇಷ ಬೇಜವಾಬ್ದಾರಿ ಮಾತುಗಳಿಂದ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅನಗತ್ಯ ಸಿಟ್ಟಿನಿಂದ ಆಗುವ ನಷ್ಟ ತಪ್ಪಿಸಲು ಸಮಾಧಾನದಿಂದ ಇರುವುದು ಒಳ್ಳೆಯದು. ನ್ಯಾಯಾಲಯದಲ್ಲಿನ ವ್ಯವಹಾರಗಳನ್ನು ಸ್ವಲ್ಪ ಮುಂದೂಡುವುದು ಒಳ್ಳೆಯದು. ಲೇವಾದೇವಿ ಮಾಡುವವರಿಗೆ ಬಾಕಿ ಹಣಗಳು ಬಂದು ಸಂತಸವಾಗುತ್ತದೆ.
ವೃಷಭ
ಕಚೇರಿ ಕೆಲಸಗಳಲ್ಲಿ ಜಾಗರೂಕರಾಗಿ ವ್ಯವಹರಿಸುವುದು ಒಳ್ಳೆಯದು. ಎದುರಾದ ಸಮಸ್ಯೆಯನ್ನು ಎದುರಿಸಿ ಗೆಲ್ಲುವುದು ಒಳ್ಳೆಯದು. ಇದಕ್ಕೆ ಸಹೋದ್ಯೋಗಿಗಳಿಂದ ಸಕಾಲಿಕ ಸಹಾಯಗಳು ಮತ್ತು ಸಲಹೆಗಳು ದೊರೆಯುತ್ತವೆ.
ಮಿಥುನ
ಅಡ್ಡಿ ಆತಂಕಗಳಿಲ್ಲದೆ ನಿಮ್ಮ ಕೆಲವು ಕೆಲಸಗಳು ನೆರವೇರುವ ಸಾಧ್ಯತೆಯಿದೆ. ಮಧ್ಯವರ್ತಿಗಳ ಸಹಾಯದಿಂದ ವಿವಾಹ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಹೆಚ್ಚಿನ ನಿಷ್ಠೆ ಪ್ರಾಮಾಣಿಕತೆಯ ಪ್ರದರ್ಶನ ಅಗತ್ಯ.
ಕಟಕ
ವ್ಯವಹಾರದಲ್ಲಿ ಮಿತವ್ಯಯವನ್ನು ಸಾಧಿಸುವಿರಿ. ಗಾಳಿಸುದ್ದಿಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿರ್ಲಕ್ಷ್ಯ ಮಾಡುವುದು ಒಳಿತು. ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಉತ್ತಮ ನೈಪುಣ್ಯತೆಯನ್ನು ಪಡೆಯುವಿರಿ.
ಸಿಂಹ
ಸೌಜನ್ಯದ ನಡವಳಿಕೆಯಿಂದ ಜನರ ನಡುವೆ ಗೌರವಾದರಗಳನ್ನು ಪಡೆಯುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಕಳೆದು ಹೋದ ವಸ್ತುಗಳು ಪುನಹ ದೊರೆಯುವ ಸಾಧ್ಯತೆಗಳಿವೆ.
ಕನ್ಯಾ
ಮಾತಿನಲ್ಲಿ ಕಠಿಣತೆ ಬೇಡ. ಅದು ನಿಮಗೆ ಮುಳುವಾಗುವ ಸಂದರ್ಭವಿದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಆಸ್ತಿಪಾಸ್ತಿಗಳ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ಇರಲಿ. ಭೂಮಿಯ ವ್ಯವಹಾರ ಮಾಡುವವರಿಗೆ ಹೆಚ್ಚಿನ ಗಳಿಕೆ ಇರುತ್ತದೆ.
ತುಲಾ
ಒಂದು ರೀತಿ ಆಲಸ್ಯ ಆವರಿಸುತ್ತದೆ. ಕಮಿಷನ್ ವ್ಯವಹಾರ ಮಾಡುವವರಿಗೆ ಆದಾಯ ಇರುತ್ತದೆ. ಮಹಿಳೆಯರಿಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಾಕಷ್ಟು ಬಿಡುವಿಲ್ಲದ
ಕೆಲಸವಿರುತ್ತದೆ. ಹಣದ ಒಳ ಹರಿವು ಸಾಮಾನ್ಯವಾಗಿರುತ್ತದೆ.
ವೃಶ್ಚಿಕ
ವಿದ್ಯುತ್ ಸಲಕರಣೆಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಯಾಂತ್ರಿಕ ಸಲಕರಣೆಗಳ ಬಿಡಿಭಾಗಗಳನ್ನು ತಯಾರಿಸಿ ಮಾರಾಟ ಮಾಡುವವರ ವ್ಯವಹಾರ ವೃದ್ಧಿಸಿ ಆದಾಯ ಹೆಚ್ಚುವ ಸಾಧ್ಯತೆ ಇದೆ.
ಧನು
ಕ್ರೀಡಾಪಟುಗಳಿಗೆ ಹೆಚ್ಚಿನ ಸಾಧನೆ ಮಾಡುವ ಅವಕಾಶ ಒದಗುತ್ತದೆ. ಹಿರಿಯ ಅನುಭವಿ ಆಟಗಾರರಿಂದ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಉತ್ಪಾದನಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ವ್ಯವಹಾರವಾಗಿ ಲಾಭ ಬರುತ್ತದೆ.
ಮಕರ
ಕುಟುಂಬದ ಸದಸ್ಯರೊಡನೆ ಸಂತೋಷವಾಗಿ ಕಾಲಕಳೆಯಲು ಇಚ್ಚಿಸುವಿರಿ. ದ್ವಿದಳ ಧಾನ್ಯಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಕಲಾವಿದರುಗಳಿಗೆ ಉತ್ತಮಗೌರವದ ಜೊತೆಗೆ ಹೆಚ್ಚಿನ ಸಂಭಾವನೆ ಸಹ ದೊರೆಯುತ್ತದೆ
ಕುಂಭ
ನಿಮ್ಮ ಕಾರ್ಯಯೋಜನೆಯ ಯಶಸ್ಸಿಗಾಗಿ ಸಾಕಷ್ಟು ಸಲಹೆಗಳು ಬಂದರೂ ಅದನ್ನು ಸ್ವಯಂ ತುಲನೆಮಾಡಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಉತ್ತಮ. ಯುವಕರಿಗೆ ಉದ್ಯೋಗದಲ್ಲಿ ಅಡೆ ತಡೆಗಳು ಬರುವ ಸಾಧ್ಯತೆಗಳಿವೆ.
ಮೀನ
ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಾಗ ಬೇರೆಯವರ ಮೇಲೆ ಅದರ ಪರಿಣಾಮ ಏನಾಗುವುದೆಂದು ಯೋಚಿಸಿ ತೆಗೆದುಕೊಳ್ಳಿರಿ. ಇಲ್ಲವಾದಲ್ಲಿ ಆ ಪರಿಣಾಮದ ಬಿಸಿ ನಿಮಗೂ ತಟ್ಟುವುದು. ಆರ್ಥಿಕ ಸ್ಥಿತಿಯು ನಿಮ್ಮ ನಿರೀಕ್ಷೆಯಂತೆ ಇರುತ್ತದೆ. ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರವಾಗುವ ಲಕ್ಷಣಗಳಿವೆ.















