ಬಂಟ್ವಾಳ :ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಯ ಬಂಟ್ವಾಳ ವಲಯದ ವತಿಯಿಂದ ವಲಯದ ಕುಟುಂಬ ಸದಸ್ಯರಿಗೋಸ್ಕರ ಕುಟುಂಬ ಸಮ್ಮಿಲನ ಹಾಗೂ ಆಟಿ ಕೂಟ ಕಾರ್ಯಕ್ರಮ ಬಿಸಿರೋಡ್ ಕನ್ನಡ ಭವನ ದಲ್ಲಿ ನಡೆಯಿತು.
ಕಾರ್ಯಕ್ರಮ ದ ಉದ್ಘಾಟನೆಯನ್ನು ಜೇಸಿ ಪೂರ್ವಧ್ಯಕ್ಷರಾದ ಉದ್ಯಮಿ ಸದಾನಂದ ಬಂಗೇರ ರವರು ಆಟಿಯ ತಿನಸು ಕನಿಲೆ ಯನ್ನು ಸುಳಿಯುವ ಮೂಲಕ ನೆರವೇರಿಸಿದರು.
ವೇದಿಕೆ ಯಲ್ಲಿ ವಲಯಧ್ಯಕ್ಷರಾದ ರಾಜೇಂದ್ರ ಕೆ, ಸಂಪನ್ಮೂಲ ವ್ಯಕ್ತಿ ಜೇಸಿ ನಾಗರಾಜ್ ಬಜಾಲ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ್ ಯಾನ್, ಜಿಲ್ಲಾ ಕ್ರೀಡಾಕಾರ್ಯದರ್ಶಿ ಹರೀಶ್ ಕುಂದರ್, ಗೌರವಾಧ್ಯಕ್ಷರಾದ ಕಿಶೋರ್, ಕಾರ್ಯದರ್ಶಿ
ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣರಾಜ್ ರಾವ್ ,ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶರತ್ ಕಲ್ಲಡ್ಕ ಹಾಗೂ ಅಜಿತ್ ಬಂಟ್ವಾಳ ರವರು ಉಪಸ್ಥಿತರಿದ್ದರು.
ಗೌರವಧ್ಯಕ್ಷರಾದ ಕಿಶೋರ್ ಸ್ವಾಗತಿಸಿ, ರವಿ ಕಲ್ಪನೆ ಧನ್ಯವಾದ ವಿತ್ತರು. ದಯಾನಂದ್ ಬಂಟ್ವಾಳ್ ರವರು ಕಾರ್ಯಕ್ರಮ ನಿರೂಪಿಸಿದರು. ನಂತರ ನಾಗರಾಜ್ ಬಜಾಲ್ ರವರು ಸದಸ್ಯರೂಗಳಿಗೆ ವಿವಿಧ ಆಟೋಟ ಹಾಗು ಮನರಂಜನೆ ಗಳನ್ನು ನಡೆಸಿ ಕೊಟ್ಟರು.

















