ಮಜಿ :ಯುವಶಕ್ತಿ ಫ್ರೆಂಡ್ಸ್ ಅಶ್ರಯದಲ್ಲಿ ಅದ್ದೂರಿಯ ಕೆಸರ್‌ಡೊಂಜಿ ದಿನ"ಕಾರ್ಯಕ್ರಮ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ. ಯುವಶಕ್ತಿ ಮಾತೃ ಮಂಡಳಿ ಸಂಘಟನೆಗೆ ಚಾಲನೆ.

Coastal Bulletin
ಮಜಿ :ಯುವಶಕ್ತಿ ಫ್ರೆಂಡ್ಸ್ ಅಶ್ರಯದಲ್ಲಿ ಅದ್ದೂರಿಯ ಕೆಸರ್‌ಡೊಂಜಿ ದಿನ"ಕಾರ್ಯಕ್ರಮ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ. ಯುವಶಕ್ತಿ ಮಾತೃ ಮಂಡಳಿ ಸಂಘಟನೆಗೆ ಚಾಲನೆ.

ಬಂಟ್ವಾಳ :ಕೃಷಿ ಪ್ರಧಾನ ಜಿಲ್ಲೆಯಲ್ಲಿ ತುಳುನಾಡಿನ ಕ್ರೀಡೆ ಮತ್ತು ಆಟಿ ತಿಂಗಳ ಆಹಾರ ಪದ್ಧತಿ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ತಾಲೂಕಿನ ತುಂಬೆ ಗ್ರಾಮದ ಯುವಶಕ್ತಿ ಫ್ರೆಂಡ್ಸ್ ಮಜಿ ಅಶ್ರಯದಲ್ಲಿ "ಕೆಸರ್‌ಡೊಂಜಿ ದಿನ"ಕಾರ್ಯಕ್ರಮವು ಆ. 9ರಂದು ಆದಿತ್ಯವಾರ ತುಂಬೆ ಮಜಿಯಲ್ಲಿ ಅದ್ದೂರಿಯಾಗಿ ನಡೆಯಿತು.


ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಹಿರಿಯರಾದ ಮೋನಪ್ಪ ಮಜಿ, ತುಂಬೆ ಗ್ರಾ ಪಂ ನಿಕಟಪೂರ್ವ ಅಧ್ಯಕ್ಷ ಗಣೇಶ್ ಸಾಲಿಯಾನ್ ತುಂಬೆ, ಮಾಜಿ ಅಧ್ಯಕ್ಷ ಪ್ರವೀಣ್ ತುಂಬೆ, ಕಲಾ ಪೋಷಕ ಸದಾಶಿವ ಡಿ ತುಂಬೆ, ದೇವದಾಸ ಪರ್ಲಕ್ಕೆ ಉಪಸ್ಥಿತರಿದ್ದರು.

ಸ್ಥಳೀಯರಿಗಾಗಿ ನಡೆದ ಕೆಸರ್‌ಡೊಂಜಿ ದಿನ ಕಾರ್ಯಕ್ರಮದಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಮಕ್ಕಳಿಗೆ ಹಗ್ಗ ಜಗ್ಗಾಟ ಸಹಿತ ಪ್ರತ್ಯೇಕ ವಿವಿಧ ಆಟೋಟ ಸ್ಪರ್ಧೆ ನಡೆಯಿತು, ಸ್ಥಳೀಯರು ಸಂಭ್ರಮದಲ್ಲಿ ಕೆಸರು ಗದ್ದೆಯಲ್ಲಿ ಮಿಂದ್ದೆದ್ದರು.


ಈ ಸಂದರ್ಭದಲ್ಲಿ ಸ್ಥಳೀಯ

ವಿದ್ಯಾರ್ಥಿ ಪ್ರತಿಭೆಗಳನ್ನು ಹಾಗೂ ಸಾಧಕ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ನೂತನವಾಗಿ "ಯುವ ಶಕ್ತಿ ಮಾತೃ ಮಂಡಳಿ"ಸಂಘಟನೆಗೆ ಚಾಲನೆ ನೀಡಲಾಯಿತು.


ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ, ಹಿರಿಯರಾದ ಸೋಮಪ್ಪ ಪೂಜಾರಿ, ಕಿರಣ್ ಎಂ ಜಿ ಸ್ಟೋರ್, ಯುವಶಕ್ತಿ ಸಂಘಟನೆಯ ಅಧ್ಯಕ್ಷ ರಂಜಿತ್ ಕುಲಾಲ್, ಗೌರವಾಧ್ಯಕ್ಷ ಮಹಾಬಲ ಮಜಿ, ಮಾತೃ ಮಂಡಳಿಯ ಅಧ್ಯಕ್ಷೆ ಶಾಲಿನಿ ಭಾಸ್ಕರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರದವರಿಗೆ ಬಹುಮಾನ ವಿತರಿಸಲಾಯಿತು, ಮದ್ಯಾಹ್ನ ಆಷಾಡ ಮಾಸದ ವಿಶೇಷ ಖಾದ್ಯಗಳ ಸಹಭೋಜನ ನಡೆಯಿತು. ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Comment