ಬಂಟ್ವಾಳ: ಕೃಷಿ ಪ್ರಧಾನ ಜಿಲ್ಲೆಯಲ್ಲಿ ತುಳುನಾಡಿನ ಕ್ರೀಡೆ ಮತ್ತು ಆಟಿ ತಿಂಗಳ ಆಹಾರ ಪದ್ಧತಿ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಯುವ ಗಾಣಿಗ ಸಂಘ ಇತರರಿಗೆ ಮಾದರಿಯಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸ್ಪರ್ಶ ಸಭಾಂಗಣ ಬಳಿ ಗಾಣಿಗರ ಯುವ ವೇದಿಕೆ ವತಿಯಿಂದ ಭಾನುವಾರ ನಡೆದ 'ಕೆಸರ್ ಡ್ ಒಂಜಿ ದಿನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಗತಿಪರ ಕೃಷಿಕ ಸಂಜೀವ ಸಪಲ್ಯ ಕೇದಗೆ ಮತ್ತು ಯಶೋಧ ಸಪಲ್ಯ ದಂಪತಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಸಾಧಕರಾದ ಕೃಷ್ಣಪ್ಪ ಗಾಣಿಗ, ಆಯುಷ್, ರಿಶಾನ, ಜಾನ್ವಿ ಇವರನ್ನು ಸನ್ಮಾನಿಸಲಾಯಿತು. ಬಾರ್ಕೂರು ಗೋಪಾಲಕೃಷ್ಣ ದೇವಳದ ಅಧ್ಯಕ್ಷ ಉದಯ ಕುಮಾರ್,
ಬಿಜೆಪಿ ಜಿಲ್ಲಾ ವಕ್ತಾರ ಮಾಧವ ಎಸ್. ಮಾವೆ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಭಯಂಕೇಶ್ವರ ದೇವಳದ ಅಧ್ಯಕ್ಷ ಬಿ. ರಘುನಾಥ ಸೋಮಯಾಜಿ, ಸದಸ್ಯ ಲೋಕೇಶ್ ನರಹರಿ, ನಾಲ್ಕೈ ತ್ತಾಯ ದೈವಸ್ಥಾನ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಾಲ್ ಶುಭ ಹಾರೈಸಿದರು.
ಪುರುಷರು ಮತ್ತು ಮಹಿಳೆಯರು ಸೇರಿದಂತೆ ಮಕ್ಕಳಿಗೆ ಹಗ್ಗ ಜಗ್ಗಾಟ ಸಹಿತ ಪ್ರತ್ಯೇಕ ಆಟೋಟ ಸ್ಪರ್ಧೆ ಮತ್ತು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಯುವ ವೇದಿಕೆ
ಅಧ್ಯಕ್ಷ ಭುವನೇಶ್ ಮೊಗರ್ನಾಡು, ಗೌರವಾಧ್ಯಕ್ಷ ನವೀನ್ ಮಾಣಿಮಜಲು,
ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಪ್ರಮುಖರಾದ ನಾಗರಾಜ ಗಾಣಿಗ, ರಘುರಾಮ ಬೈಕಾಡಿ, ರಾಮಕೃಷ್ಣ ಹಾರಾಡಿ, ಗಣೇಶ್ ಗಾಣಿಗ,ನರ್ಸಪ್ಪ ಅಮೀನ್, ರಾಜೇಶ್,ಮೆಂಡನ್, ಸಚಿನ್ ಮೆಲ್ಕಾರ್, ಬಾಲಕೃಷ್ಣ ಸೆರ್ಕಳ, ಮೋಹನ್ ಕೆ. ಶ್ರೀಯಾನ್ ರಾಯಿ, ಆಶಾ ವೇದವ, ಪದ್ಮನಾಭ ಇಡ್ಕಿದು, ಕೃಷ್ಣಪ್ಪ ಬಂಗೇರ, ವಸಂತ ಪಿ., ಸಂದೀಪ್ ಮಾರ್ನಬೈಲು, ಪ್ರವೇಶ್ ಗಾಣಿಗ ಪುತ್ರೋಟಿ ಬೈಲು , ವಿಕ್ರಮ್ ಬಂಗೇರ ಸಜಿಪ, ಕೃಷ್ಣಪ್ಪ ಕೆಮ್ಮನಾಜೆ, ದಿನೇಶ್ ಬಂಗೇರ, ಪದ್ಮನಾಭ ಜಕ್ರಿಬೆಟ್ಟು ಜಗದೀಶ್ ಕುಂದರ್, ಸದಾಶಿವ ಪುತ್ರನ್, ಶರತ್ ಕುರ್ಚಿಪಳ್ಳ, ರವೀಂದ್ರ ಸಪಲ್ಯ, ಪ್ರಸಾದ್ ಕರ್ಬೆಟ್ಟು, ತೀರ್ಪುಗಾರರಾದ ಬಾಲಕೃಷ್ಣ ಮಾಸ್ಟರ್, ಜಯರಾಜ್ ಕಾಂಚನ್, ರೋಹಿಣಿ ಅಶೋಕ್, ಅನುಷಾ ಕಲ್ಲಡ್ಕ ಭಾಗವಹಿಸಿದ್ದರು.ಧೃತಿ ಮತ್ತು ರಿಧಿ ಪ್ರಾರ್ಥಿಸಿದರು.
ಕೃಷ್ಣಪ್ಪ ಅಂತರ ಸ್ವಾಗತಿಸಿ, ವೆಂಕಪ್ಪ ಮಾಸ್ಟರ್ ವಂದಿಸಿದರು. ತಾರನಾಥ ಕರ್ಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
















