ಬಂಟ್ವಾಳ : ಕರಾವಳಿ ಕರ್ನಾಟಕದ ಸಂಸ್ಕೃತಿ, ಸಂಪ್ರದಾಯ ಮತ್ತು ಪ್ರಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ಆಟಿ ತಿಂಗಳ ವಿಶೇಷತೆ ಬಗ್ಗೆ ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಆಟಿ ಸಂಭ್ರಮ ಕಾರ್ಯಕ್ರಮ ನಡೆಯಿತು.
ಅಮ್ಟಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಭಾರತಿ ಎಸ್ ಚೌಟ ಇವರು ಉದ್ಘಾಟರಾಗಿ ಆಗಮಿಸಿ ಶಾಲಾ ವಿದ್ಯಾರ್ಥಿಗಳಿಗೆ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮುಂದಿನ ಪೀಳಿಗೆಗೆ ಇಂತಹ ಸಂಭ್ರಮದ ಮಹತ್ವ ತಿಳಿಯಬೇಕಾದರೆ ಈ ಆಚರಣೆಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಸಾಧು ಅಧ್ಯಕ್ಷತೆ ವಹಿಸಿದ್ದರು ಹಿರಿಯ ಶಿಕ್ಷಕರಾದ ತಿಪ್ಪೇ ಸ್ವಾಮಿ ಆರ್ ಇವರು
ಸಹಕರಿಸಿದರು.
ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳ ಹೆತ್ತವರು ತಯಾರಿಸಿ ನೀಡಿರುವ ಸುಮಾರು 30 ರಿಂದ 35 ವಿವಿಧ ಬಗೆಯ ಆಟಿ ತಿಂಗಳ ವಿಶೇಷ ತಿಂಡಿ ಪದಾರ್ಥಗಳನ್ನು ಮಧ್ಯಾಹ್ನ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಹ ಭೋಜನ ಸವಿದರು,
ಕಾರ್ಯಕ್ರಮದಲ್ಲಿ ಇನ್ಫೆಂಟ್ ಜೀಸಸ್ ಕನ್ನಡ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಶಾಲೆಯ ಸಕ್ರಿಯವಾಗಿ ಪಾಲ್ಗೊಂಡಿದ್ದರು.ಈ ಕಾರ್ಯಕ್ರಮವನ್ನು ಸವಿತಾ ವಿ ಜಿ ಆಯೋಜಿಸಿದರು ವೀರ ಡಿಸೋಜಾ ನಿರೂಪಿಸಿ ಕುಮಾರಿ ಕುಶಲ ವಂದಿಸಿದರು.
















