ಬಿ ಸಿ ರೋಡ್ :ಬೀಕರ ವಾಹನ ಅಪಘಾತ ಓರ್ವನ ಸಾವು, ಮತ್ತೊಬ್ಬ ಗಂಭೀರ.

Coastal Bulletin
ಬಿ ಸಿ ರೋಡ್ :ಬೀಕರ ವಾಹನ ಅಪಘಾತ ಓರ್ವನ ಸಾವು, ಮತ್ತೊಬ್ಬ ಗಂಭೀರ.

ಬಂಟ್ವಾಳ :ರಾಷ್ಟ್ರೀಯ ಹೆದ್ದಾರಿ ಬಿ.ಸಿ ರೋಡ್ ಎನ್. ಜಿ. ಸರ್ಕಲ್ ಬಳಿ ಟಿಪ್ಪರ್ ಲಾರಿ  ಆಕ್ಟಿವಾ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಹ ಸವಾರ ಮೃತ ಪಟ್ಟಿದು ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಕಲ್ಲಡ್ಕ ಕಡೆಯಿಂದ ಲೊರೆಟ್ಟೊ ಕಡೆಗೆ ಬರುತ್ತಿದ್ದ  KA-19-AF-8073 ನೋಂದಣಿಯ ಟಿಪ್ಪರ್ ವಾಹನವನ್ನು ಅದರ ಚಾಲಕ ಬಂಟ್ವಾಳ ಪಲ್ಲಮಜಲು ನಿವಾಸಿ ಸಲ್ಮಾನ್‌ ಫಾರುಕ್ (33) ಎಂಬಾತನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೆರಳುತ್ತಿದ್ದ KA-70-H-5059  ನೊಂದಣಿ ಸಂಖ್ಯೆಯ ಸ್ಕೂಟರ್ ಗೆ ಡಿಕ್ಕಿಪಡಿಸಿರುತ್ತಾನೆ. ಅಪಘಾತದಲ್ಲಿ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಪಾಣೆಮಂಗಳೂರು ನಾಯಿಲ ನಿವಾಸಿಗಳಾದ ಸವಾರ ದಯಾನಂದ ಹಾಗೂ

ಸಹ ಸವಾರ ಯಶ್ವಂತ್‌ ಕುಲಾಲ್‌ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಸರಕಾರಿ ವೆನ್‌ ಲಾಕ್‌ ಆಸ್ಪತ್ರೆಗೆ  ದಾಖಲಿಸಲಾಗಿರುತ್ತದೆ. ಗಾಯಾಳುಗಳ ಪೈಕಿ ಸಹಸವಾರ ಯಶ್ವಂತ್‌ ಕುಲಾಲ್‌ ರವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದು, ದಯಾನಂದ ರವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.ಆರೋಪಿ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

Leave a Comment