ಬಂಟ್ವಾಳ : ಭಾರತ ಇಂದು ನಿರ್ಣಾಯಕ ಘಟ್ಟದಲ್ಲಿದೆ. ಕೇಂದ್ರ ಸರಕಾರದ ಒಂದು ದಶಕದ ಆಡಳಿತವು ದೇಶವನ್ನು ಕ್ರಮೇಣ ಆತಂಕ, ನಿರಾಶೆ ಮತ್ತು ಹೆಚ್ಚುತ್ತಿರುವ ಸಂಕಷ್ಟದತ್ತ ಕೊಂಡೊಯ್ದಿದೆ. ಬಿ.ಜೆ.ಪಿ ಸರಕಾರವು ಚುನಾನಣೆಯಲ್ಲಿ ಅಭಿವೃದ್ಧಿ, ಉದ್ಯೋಗ, ಸಮೃದ್ಧಿ, ಉತ್ತಮ ಆಡಳಿತ ಮತ್ತು ಉತ್ತಮ ಭವಿಷ್ಯದ ಬಗ್ಗೆ ನೀಡಿದ ಭರವಸೆ ಹುಸಿಯಾಗಿದೆ. ಇಂದು ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಸಹಿಸಲಾಗದ ಬೆಲೆ ಏರಿಕೆ, ಆರ್ಥಿಕ ಅಸಮಾನತೆ, ದುರ್ಬಲಗೊಂಡ ಗ್ರಾಮೀಣ ಆರ್ಥಿಕತೆ, ಕ್ಷೀಣಿಸುತ್ತಿರುವ ಪ್ರಜಾಸತ್ತಾತ್ಮಕ ಅವಕಾಶಗಳು ದೇಶದ ಸರಕಾರದ ವೈಫಲ್ಯವನ್ನು ಎತ್ತಿ ತೊರಿಸುತ್ತಿದೆ. ಅಂದು ಆಂಗ್ಲರಿಂದ ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುವ ಸ್ವತಂತ್ರ ಹೋರಾಟಗಳು ನಡೆದರೆ ಇಂದು ದೇಶವನ್ನು ಸಾಮ್ರಾಜ್ಯಶಾಹಿಗಳಿಗೆ ಮಾರುವ ದೇಶೀಯ ಬ್ರಿಟೀಷರಿಂದ ದೇಶವನ್ನು ರಕ್ಷಿಸುವ ಅಗತ್ಯತೆ ಇದೆ ಎಂದು ಸಿಪಿಐ ರಾಜ್ಯ ಮಂಡಳಿ ಕಾರ‍್ಯದರ್ಶಿ ಸಾತಿ ಸಂದರೇಶ್ ಅಭಿಪ್ರಾಯ ಪಟ್ಟರು.
ಅವರು ಇಂದು ಬಂಟ್ವಾಳ ನಗರದಲ್ಲಿ ಸಿಪಿಐ ರಾಷ್ಟವ್ಯಾಪಿ ರಾಜಕೀಯ ಅಭಿಯಾನದ ಭಾಗವಾಗಿ ಜರುಗಿದ ಪಾದಾಯಾತ್ರೆ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅವರು ಮುಂದುವರಿದು ಒಂದು ದಶಕಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಮೋದಿ ಸರ್ಕಾರವು ಅಭೂತಪೂರ್ವ ಪ್ರಗತಿಯ ಚಿತ್ರಣವನ್ನು ಮಾತ್ರ ಜನರ ಮುಂದೆ ಬಿಂಬಿಸುತ್ತಿದೆ. ನಿರುದ್ಯೋಗ ಮಿತಿ ಮೀರುತ್ತಿದೆ. ಬೆಲೆ ಏರಿಕೆ ಜನತೆಯನ್ನು ಭಾರೀ ಬಾಧಿಸುತ್ತಿದೆ. ಅನ್ನದಾತ ರೈತನ ಬದುಕು ಹಸನಾಗುತ್ತಿಲ್ಲ. ಉದ್ಯೋಗ ಕಾತ್ರಿ ಯೋಜನೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ವಾಣಿಜ್ಯೀಕರಣಗೊಳಿಸಲಾಗುತ್ತಿದೆ. ದೇಶದ ಸಂಪತ್ತು ಸೃಷ್ಟಿಸುವ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಬದುಕುವಮತಾಗಿದೆ. ಮಹಿಳಾ ಮೀಸಲಾತಿಗೆ ಸಂಬಂದಿಸಿ ಸಂವಿಧಾನ ತಿದ್ದುಪಡಿಯನ್ನು ಯಾವುದೇ ವಿಳಂಬವಿಲ್ಲದೇ ಜಾರಿಗೊಳಿಸಬೇಕು. ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯಗಳು ನಿಲ್ಲಬೇಕು, ಚುನಾವಣೆ ಸುಧಾರಣೆಯಾಗಬೇಕು ಎಂಬಿತ್ಯಾದಿ ಸಂವಿಧಾನದ ಮೂಲ ಆಶಯಗಳನ್ನು ಮುಂದಿಟ್ಟುಕೊಂಡು ಬದಲಾವಣೆ ಬೇಕು ಎಂಬ ಘೋಷಣೆಯೊಂದಿಗೆ ಸಿಪಿಐ ನಿಂದ ಸೆಪ್ಟೆಂಬರ್ ೧ ರಂದು ರಾಮ್ ಲೀಲಾ ಮೈದಾನದಲ್ಲಿ ದೆಹಲಿ ಚಲೋ ಕರ‍್ಯಕ್ರಮ ನಡೆಯಲಿದೆ. ಅದರ ಪೂರ್ವ ಭಾವಿಯಾಗಿ ದೇಶದಾದ್ಯಂತ ರಾಜಕೀಯ ಜಾಗೃತಿ ಮೂಡಿಸಲು
ಹಳ್ಳಿ ಹಳ್ಳಿಗಳಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ಆಗಸ್ಟ್ ೬ ರಿಂದ ೧೫ ರ ವರೆಗೆ ಪಾದಾಯಾತ್ರೆ ನಡೆಯಲಿದೆ ಎಂದರು.
ಸಭೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಕರ‍್ಯದರ್ಶಿ ಬಿ.ಶೇಖರ್, ಜಿಲ್ಲಾ ಸಹ ಕರ‍್ಯದರ್ಶಿ ವಿ.ಎಸ್.ಬೇರಿಂಜ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಮಾಜೀ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಕರ‍್ಯಕಾರಿ ಸಮಿತಿ ಸದಸ್ಯ ಎಚ್.ವಿ ರಾವ್, ಪಕ್ಷದ ಮಂಗಳೂರು ತಾಲೂಕು ಕಾರ್ಯದರ್ಶೀ ಎಂ.ಕರುಣಾಕರ, ಜಿಲ್ಲಾ ಮಂಡಳಿ ಸದಸ್ಯರಾದ ಭಾರತಿ ಪ್ರಶಾಂತ್, ಗೀತಾ ಬಜಾಲ್ ಉಪಸ್ಥಿತರಿದ್ದರು.
ನೇತೃತ್ವವನ್ನು ತಾಲೂಕು ಮುಖಂಡ ಬಿ.ಬಾಬು ಭಂಡಾರಿ, ಎಐವೈಎಫ್ ಮುಖಂಡ ಪುಷ್ಪರಾಜ್ ಬೋಳೂರು, ಸುಧಾಕರ ಕಲ್ಲೂರು, ಕೃಷ್ಣಪ್ಪ ವಾಮಂಜೂರು, ಎನ್ ಎಫ್ ಐ ಡಬ್ಲೂö್ಯ ನಾಯಕಿ ಶಮಿತ, ಮಮತ, ಮೋಹಿನಿ, ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯೆ ಚಂದ್ರಾವತಿ ಕೆ. ಜಯಂತ, ಸರೋಜಿನಿ ಕುರಿಯಾಳ, ಎಐವೈಎಫ್ ಮುಖಂಡ ಶ್ರೀನಿವಾಸ ಭಂಡಾರಿ, ಪಕ್ಷದ ವಿಟ್ಲದ ಮುಖಂಡ ಒ ಕೃಷ್ಣ, ಮೋಹನ ಅರಳ ವಹಿಸಿದ್ದರು.
ಪಕ್ಷದ ಬಂಟ್ವಾಳ ತಾಲೂಕ ಕಾರ‍್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ, ವಂದಿಸಿದರು.
















