ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮಹಾಸಭೆ.

Coastal Bulletin
ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮಹಾಸಭೆ.

ಬಂಟ್ವಾಳ :ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.)ದಕ್ಷಿಣ ಕನ್ನಡ - ಉಡುಪಿ ಜಿಲ್ಲೆ,  ಬಂಟ್ವಾಳ ವಲಯದ 27 ನೇ ವಾರ್ಷಿಕ ಸಭೆಯು  ಬಿಸಿ ರೋಡ್ ಅಂಬೇಡ್ಕರ್ ಭವನದಲ್ಲಿ  ನಡೆಯಿತು.

ವಲಯಧ್ಯಕ್ಷರಾದ ರಾಜೇಂದ್ರ ಕೆ. ರವರ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯನ್ನು, ಎಸ್ ಕೆ ಪಿ ಎ ಜಿಲ್ಲಾಧ್ಯಕ್ಷರಾದ ಶ್ರೀ ನವೀನ್ ರೈ ಪಂಜಳರವರು ಉದ್ಘಾಟಿಸಿ,ವಲಯದ  ಕಾರ್ಯಕ್ರಮಗಳ  ಬಗ್ಗೆ ಮೆಚ್ಚುಗೆ  ಮಾತುಗಳನ್ನಾಡಿ, ಜಿಲ್ಲೆಯ ಸಾಂತ್ವನ ( ವಿಮೆ ) ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್,ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ರಾದ ಆನಂದ್  ಏನ್. ಜಿಲ್ಲಾ ಉಪಾಧ್ಯಕ್ಷರಾದ  ದೇವರಾಜ್ ಶೆಟ್ಟಿ, ಜಿಲ್ಲಾ ಕ್ರೀಡಾಕಾರ್ಯದರ್ಶಿ ಹರೀಶ್ ಕುಂದರ್, ಎಸ್ ಕೆ ಪಿ ವಿವಿದೊದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾದ ಟಿ ಹರೀಶ್  ರಾವ್, ಗೌರವಾಧ್ಯಕ್ಷರಾದ  ಕಿಶೋರ್ ಕುಮಾರ್. ವಲಯದ

ಪ್ರದಾನ ಕಾರ್ಯದರ್ಶಿ  ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣರಾಜ್ ರಾವ್, ಉಪಾಧ್ಯಕ್ಷರುಗಳಾದ ಹರೀಶ್ ನಾಟಿ ಹಾಗು ರೋಷನ್ ಕಲ್ಲಡ್ಕ ಉಪಸ್ಥಿತರಿದ್ದರು. ರವಿ ಕಲ್ಪನೆ

2025-26ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ, ಕೃಷ್ಣ ರಾಜ್ ರಾವ್ ರವರು ಜಮಾ ಖರ್ಚು ಮಂಡಿಸಿದರು.  ಪಿ ಯು ಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ  ಅತೀ ಹೆಚ್ಚು ಅಂಕ ಗಳಿಸಿದ ವಲಯದ ಸದಸ್ಯ ರ ಮಕ್ಕಳಿಗೆ  ವಿದ್ಯಾನಿಧಿಯನ್ನು ನೀಡಿ ಗೌರವಿಸಲಾಯಿತು.

ವಲಯದ ಗೌರವಧ್ಯಕ್ಷರಾದ ಕಿಶೋರ್ ಕುಮಾರ್ ಸ್ವಾಗತಿಸಿ, ರೋಷನ್ ಕಲ್ಲಡ್ಕ ಧನ್ಯವಾದ ವಿತ್ತರು. ದಯಾನಂದ್ ಬಂಟ್ವಾಳ್ ರವರು ಕಾರ್ಯಕ್ರಮ ನಿರೂಪಿಸಿದರು.

Leave a Comment