ಬಂಟ್ವಾಳ :ತಾಲೂಕಿನ ತುಂಬೆ ಗ್ರಾಮದ ಯುವಶಕ್ತಿ ಫ್ರೆಂಡ್ಸ್ ಮಜಿ ಅಶ್ರಯದಲ್ಲಿ ಸ್ಥಳೀಯರಿಗಾಗಿ 5ನೇ ವರ್ಷದ "ಕೆಸರ್‌ಡೊಂಜಿ ದಿನ"ಕಾರ್ಯಕ್ರಮವು ಆ. 9ರಂದು ಆದಿತ್ಯವಾರ ತುಂಬೆ ಮಜಿಯಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ಕಾರ್ಯಕ್ರಮ ಉದ್ಘಾಟನೆಗೊಂಡು ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ಸಂಜೆಯ ತನಕ ನಡೆಯಲಿದೆ,ಮದ್ಯಾಹ್ನ
ಆಷಾಡ ಮಾಸದ ವಿಶೇಷ ಸಹಭೋಜನ ನಡೆಯಲಿದೆ ಸಂಜೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
















