ಬಂಟ್ವಾಳ :ಎಡುವೆಂಚರ್ ಪದವಿ ಪೂರ್ವ ಕಾಲೇಜು ನೆತ್ತರಕೆರೆ ಇದರ ಅಶ್ರಯದಲ್ಲಿ ಆಯೋಜಿಸಲ್ಪಟ್ಟ “ಹಸಿರು ಹೆಜ್ಜೆ – 2026” ಕಾರ್ಯಕ್ರಮವು ಇತ್ತೀಚೆಗೆ ಹೊಳ್ಳರಬೈಲು ಹಸಿರು ಗದ್ದೆಯಲ್ಲಿ ನಡೆಯಿತು.
ತುಳುನಾಡಿನ ಸಾಂಪ್ರದಾಯಿಕ ಹಬ್ಬವಾದ “ಆಟಿದ ಕೆಸರ್ಡ್ ಒಂಜಿ ದಿನ”ದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಂಡು ಅತ್ಯಂತ ಯಶಸ್ವಿಯಾಗಿ ಹಾಗೂ ಔಚಿತ್ಯಪೂರ್ಣವಾಗಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಡುವೆಂಚರ್ ಕಾಲೇಜಿನ ಅಧ್ಯಕ್ಷರಾದ ಅಮೃತ್ ರೈ ವಹಿಸಿದ್ದರು. ಕಾರ್ಯಕ್ರಮವನ್ನು ಬಂಟರ ಸಂಘ ಬಂಟ್ವಾಳದ ಅಧ್ಯಕ್ಷರಾದ ಜಗನ್ನಾಥ ಚೌಟ ಅವರು ಉದ್ಘಾಟಿಸಿ, ಪ್ರಕೃತಿ ಸಂರಕ್ಷಣೆ ಹಾಗೂ ಹಸಿರು ಸಂಸ್ಕೃತಿಯ ಮಹತ್ವವನ್ನು ಒತ್ತಿ ಹೇಳಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ತುಂಬೆ ಗುತ್ತಿನ ಚಂದ್ರ ಪ್ರಕಾಶ್ ಶೆಟ್ಟಿ ಅವರು ತುಳುನಾಡಿನ ಪರಂಪರೆ ಹಾಗೂ ಆಟಿ ಆಚರಣೆಯ ಮಹತ್ವವನ್ನು ವಿವರಿಸಿದರು. ಸಂದೀಪ್ ಶೆಟ್ಟಿ ಅವರು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಸಾಧಕರಾದ ಮಾರ್ಷಲ್ ಪಿಂಟೋ, ಎನ್. ನಾರಾಯಣ್
ಹೊಳ್ಳ ಹಾಗೂ ರಘುನಾಥ್ ಸಪಲ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ನೆತ್ತರಕೆರೆ ಗ್ರಾಮ ವಿಕಾಸ ಜಿಲ್ಲಾ ಸಂಯೋಜಕ ದಾಮೋದರ ಹಾಗೂ ಬಂಟ್ವಾಳ ಕ್ಯಾಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಮತ್ತು ಅಡ್ವಕೇಟ್ ಆಗಿರುವ ಜೀವನ ಲಾಯ್ಡ್ ಪಿಂಟೋ ಅವರು ಅತಿಥಿಗಳಾಗಿ ಭಾಗವಹಿಸಿ ಬಹುಮಾನಗಳನ್ನು ವಿತರಿಸಿದರು.
ವಿಶೇಷವಾಗಿ ಮಕ್ಕಳಿಗಾಗಿ ಗದ್ದೆಯಲ್ಲಿ ವಿವಿಧ ಸಾಂಪ್ರದಾಯಿಕ ಆಟೋಟಗಳನ್ನು ಆಯೋಜಿಸಲಾಗಿದ್ದು, ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಂಶುಪಾಲರಾದ ಮಹೇಶ್ ಕೆ. ಎನ್ ಆತ್ಮೀಯವಾಗಿ ಸ್ವಾಗತಿಸಿದರು.ಆದಿತ್ಯ ವಟಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಹಿಂದಿ ಉಪನ್ಯಾಸಕಿ ರಶ್ಮಿತಾ ಅವರು ಧನ್ಯವಾದ ಸಮರ್ಪಿಸಿದರು.ಈ ಸಂದರ್ಭದಲ್ಲಿ ಎಡುವೆಂಚರ್ ಕಾಲೇಜಿನ ಕಾರ್ಯದರ್ಶಿ ರಕ್ಷಿತಾ ಅಮೃತ್ ರೈ,ಎಲ್ಲಾ ಟ್ರಸ್ಟಿಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು,,ವಿದ್ಯಾರ್ಥಿಗಳು ಸ್ಥಳೀಯರು ಉಪಸ್ಥಿತರಿದ್ದರು.

















