ಮದ್ಯಪ್ರಿಯರಿಗೆ ಬಿಗ್ ಶಾಕ್: ಓಲ್ಡ್ ಮಾಂಕ್, ರಾಯಲ್ ಚಾಲೆಂಜ್ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ ಬ್ಯಾನ್

Coastal Bulletin
ಮದ್ಯಪ್ರಿಯರಿಗೆ ಬಿಗ್ ಶಾಕ್: ಓಲ್ಡ್ ಮಾಂಕ್, ರಾಯಲ್ ಚಾಲೆಂಜ್ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ ಬ್ಯಾನ್

ಬೆಂಗಳೂರು: ಓಲ್ಡ್ ಮಾಂಕ್ ರಮ್ ಹಾಗೂ ಹಲವು ಪ್ರಸಿದ್ಧ ವಿಸ್ಕಿ ಬ್ರ್ಯಾಂಡ್‌ಗಳ ಪ್ರಿಯರಿಗೆ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಭಾರಿ ಆಘಾತ ನೀಡಿದೆ. ಜನಪ್ರಿಯ ಮದ್ಯದ ಬ್ರ್ಯಾಂಡ್‌ಗಳಲ್ಲಿ ಕೃತಕ ಫ್ಲೇವರ್ ಹಾಗೂ ಬಣ್ಣಗಳನ್ನು ಬೆರೆಸಿ ಗ್ರಾಹಕರಿಗೆ ದಾರಿತಪ್ಪಿಸುವ ಮಾಹಿತಿ ನೀಡಿ ಮೋಸ ಮಾಡುತ್ತಿರುವುದು ಎಫ್‌ಎಸ್‌ಎಸ್‌ಎಐ (FSSAI) ನಡೆಸಿದ ಪ್ರಯೋಗಾಲಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿರುವ ಪ್ರಮುಖ ಬ್ರ್ಯಾಂಡ್‌ಗಳನ್ನು ನಿರ್ಬಂಧಿಸಲು ಸೂಚಿಸಲಾಗಿದೆ.

ಭಾರತದ ಅತ್ಯಂತ ಹಳೆಯ ರಮ್ ಬ್ರ್ಯಾಂಡ್‌ ಆದ ಓಲ್ಡ್ ಮಾಂಕ್ (Old Monk), ಹಾಗೂ ಪ್ರಸಿದ್ಧ ವಿಸ್ಕಿ ಬ್ರ್ಯಾಂಡ್‌ಗಳಾದ ಆ್ಯಂಟಿಕ್ವಿಟಿ (Antiquity), ರಾಯಲ್ ಚಾಲೆಂಜ್ (Royal Challenge), ಮತ್ತು ಬ್ಯಾಗ್‌ಪೈಪರ್ ಡಿಲಕ್ಸ್ (Bagpiper Deluxe) ಸೇರಿದಂತೆ ಹಲವು ಪ್ರಸಿದ್ಧ ಮದ್ಯಗಳಲ್ಲಿ ಕೃತಕ ಫ್ಲೇವರ್ ಬೆರೆಸಿರುವುದು ಸಾಬೀತಾಗಿದೆ.

ಸಾಮಾನ್ಯವಾಗಿ ರಮ್ ಮತ್ತು ವಿಸ್ಕಿಯನ್ನು ಬೆಲ್ಲದ ರಸ, ಮಾಲ್ಟ್ ಅಥವಾ ದ್ರಾಕ್ಷಿ ಬಳಸಿ ನೈಸರ್ಗಿಕವಾಗಿ ಫರ್ಮಂಟೇಶನ್ ಹಾಗೂ ಮ್ಯಾಚ್ಯುರೇಶನ್ ಮಾಡಿ ಸುವಾಸನೆ ತರಲಾಗುತ್ತದೆ. ಆದರೆ ಈ ಕಂಪನಿಗಳು ನ್ಯೂಟ್ರಲ್ ಆಲ್ಕೋಹಾಲ್‌ಗೆ

ಕೃತಕ ರಮ್ ಹಾಗೂ ವಿಸ್ಕಿ ಫ್ಲೇವರ್‌ಗಳನ್ನು ಬೆರೆಸಿ ಮಾರಾಟ ಮಾಡುತ್ತಿದ್ದವು. 7 ವರ್ಷ ಹಾಗೂ 12 ವರ್ಷ ಹಳೆಯ ‘ಏಜ್ಡ್ ಮದ್ಯ’ ಎಂದು ಲೇಬಲ್ ಹಾಕಿ ಮಾರಾಟ ಮಾಡುತ್ತಿದ್ದ ಮದ್ಯಗಳು, ಪ್ರಯೋಗಾಲಯ ತಪಾಸಣೆಯಲ್ಲಿ ಕನಿಷ್ಠ 1 ವರ್ಷವೂ ಬ್ಲೆಂಡ್ ಆಗಿಲ್ಲ ಎಂಬ ಭೀಕರ ಸತ್ಯ ಬಯಲಾಗಿದೆ.

ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟವಾಡಿ, ದಾರಿತಪ್ಪಿಸುವ ಜಾಹೀರಾತು ಹಾಗೂ ಲೇಬಲ್ ನೀಡುತ್ತಿದ್ದ ಈ ಬ್ರ್ಯಾಂಡ್‌ಗಳನ್ನು FSSAI ನಿರ್ಬಂಧಿಸಿದ್ದು, ಕೇಂದ್ರ ಆಹಾರ ಇಲಾಖೆ ಮದ್ಯ ತಯಾರಿಕಾ ಕಂಪನಿಗಳ ವಿರುದ್ಧ ಕಠಿಣ ನಿಯಮ ಜಾರಿಗೆ ಮುಂದಾಗಿದೆ.

Leave a Comment