ಬಂಟ್ವಾಳ :ರಾಜ್ಯದ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಕೇಂದ್ರ ಕೃಷಿ ಮತ್ತು ಕಲ್ಯಾಣ ಇಲಾಖೆಯ ಆದೇಶದಂತೆ 2026 - 27 ನೇ ಸಾಲಿನ ಮರುವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಕೆ ಮತ್ತು ಕಾಳುಮೆಣಸು, ಬೆಳೆಗಳಿಗೆ ಬೆಳೆ ವಿಮೆಯ ಪ್ರಿಮಿಯಂ ಪಾವತಿಸುವ ದಿನಾಂಕವನ್ನು 2026 ಅಗೋಸ್ಟ್ 14 ರ ತನಕ ವಿಸ್ತರಣೆ ಮಾಡಿ ತೋಟಗಾರಿಕೆ ಇಲಾಖೆ ಆದೇಶ ಹೊರಡಿಸಿದ್ದು ಬೆಳೆ ವಿಮೆ ಪ್ರಿಮಿಯಂ ಪಾವತಿ ಮಾಡದ ರೈತರಿಗೆ ಅವಕಾಶ ಕಲ್ಪಿಕೊಡಲಾಗಿದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಬೆಳೆ ವಿಮೆ ಬಗ್ಗೆಗಿನ ಪ್ರಿಮಿಯಂ ಪಾವತಿಸಲು ಬಾಕಿ ಉಳಿದಿರುವ ರೈತ ಬಾಂಧವರು ವಿಮೆ ಪ್ರಿಮಿಯಂ ಕಂತನ್ನು ಇದೇ ತಿಂಗಳು ಅಗೋಸ್ಟ್ 14 ರ ಒಳಗೆ ಸಂಬಂಧ
ಪಟ್ಟ ತಮ್ಮ ಕಾರ್ಯ ವ್ಯಾಪ್ತಿಯ ಪ್ರಾಥಮಿಕ ಸಹಕಾರ ಸಂಘ ಗಳಲ್ಲಿ ಪಾವತಿಸಿ ಯೋಜನೆಯ ಪ್ರಯೋಜನ ಪಡೆಯಲು ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆ ಮೂಲಕಾ ವಿನಂತಿಸಿದ್ದಾರೆ.
















