ಸಿಎಂ ಒತ್ತಡಕ್ಕೆ ಸಭಾಪತಿ ಹೊರಟ್ಟಿ ರಾಜೀನಾಮೆ – ಅಂಗೀಕರಿಸದಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ

Coastal Bulletin
ಸಿಎಂ ಒತ್ತಡಕ್ಕೆ ಸಭಾಪತಿ ಹೊರಟ್ಟಿ ರಾಜೀನಾಮೆ – ಅಂಗೀಕರಿಸದಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ

ಬೆಂಗಳೂರು: ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ (Basavaraj Horatti) ಅವರಿಂದ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ. ಹೊರಟ್ಟಿ ರಾಜೀನಾಮೆಯನ್ನು ಅಂಗೀಕರಸಬಾರದು ಎಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗ (BJP Delegation) ದೂರು ಸಲ್ಲಿಸಿದೆ.

ಛಲವಾದಿ ನಾರಾಯಣಸ್ವಾಮಿ, ಶರವಣ ನೇತೃತ್ವದಲ್ಲಿ ಲೋಕಭವನಕ್ಕೆ ತೆರಳಿದ ಬಿಜೆಪಿ-ಜೆಡಿಎಸ್ ನಿಯೋಗ, ಹೊರಟ್ಟಿ ಅವರ ರಾಜೀನಾಮೆ ಅಂಗೀಕರಿಸದಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದೆ.

ಸದನ ನಡಾವಳಿ ಪ್ರಕಾರ ರಾಜೀನಾಮೆ ಸಲ್ಲಿಕೆ ಆಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದೆ. ಕಾಂಗ್ರೆಸ್ ಲೆಟರ್‌ಹೆಡ್‌ನಲ್ಲಿ ಸಭಾಧ್ಯಕ್ಷ, ಸಭಾಪತಿಗಳ ಹೆಸರುಗಳ ಆಯ್ಕೆ ಬಗ್ಗೆಯೂ ರಾಜ್ಯಪಾಲರಿಗೆ

ನಿಯೋಗ ದೂರು ಕೊಟ್ಟಿದೆ.

ರಾಜ್ಯಪಾಲರಿಗೆ ಹಂಗಾಮಿ ಸಭಾಪತಿ ಹೊರಟ್ಟಿ ಪತ್ರ

ಆಗಸ್ಟ್ 7 ರಂದು ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ತಮ್ಮ ಕೊಠಡಿಗೆ ಬಂದಿದ್ದ ನಾಯಕರು, ಇವತ್ತೇ ರಾಜೀನಾಮೆ ಕೊಡಬೇಕೆಂದು ಒತ್ತಡ ಹಾಕಿ ರಾಜೀನಾಮೆ ಪಡೆದರು ಎಂದು ರಾಜ್ಯಪಾಲರಿಗೆ ಪತ್ರ ಬೆರೆದು ಬಸವರಾಜ ಹೊರಟ್ಟಿ ಅವರು ವಿವರಣೆ ಕೊಟ್ಟಿದ್ದಾರೆ.

Leave a Comment