ತುಂಬೆ ಬಿ.ಎ ಪ.ಪೂ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ.

Coastal Bulletin
ತುಂಬೆ ಬಿ.ಎ ಪ.ಪೂ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ.

ಬಂಟ್ವಾಳ :ತುಂಬೆ ಗ್ರೂಪ್ ಯು.ಎ.ಇ ಸಂಸ್ಥಾಪಕರಾದ ಡಾ. ತುಂಬೆ ಮೊಯಿದ್ದೀನ್ ಹಾಗೂ ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್(ರಿ) ತುಂಬೆಯ ಆಶ್ರಯದಲ್ಲಿ ತುಂಬೆ ಪದವಿ-ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ ನಡೆಯಿತು.

ಸಮಾರಂಭದ ಅಧ್ಯಕ್ಷರಾದ ಬಿ ಅಬ್ದುಲ್ ಸಲಾಂ ತುಂಬೆ ಇವರು ಮಾತನಾಡುತ್ತಾ ತುಂಬೆ ಆಸು ಪಾಸಿನ ಗ್ರಾಮದ ಜನರಿಗೆ ಉತ್ತಮ ಆರೋಗ್ಯ ದೊರಕಲು ಈ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು  ಆಯೋಜಿಸಲಾಗಿದೆ ಎಂದರು.

ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧವನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಟ್ರಸ್ಟೀ ಬಿ.ಎಂ ಅಶ್ರಫ್ ಹಾಗೂ ತುಂಬೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಣೇಶ್ ಸಾಲಿಯಾನ್ ತುಂಬೆ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಬಿ ತುಂಬೆ,

ತುಂಬೆ ಪದವಿ ಪೂರ್ವ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮದ್ ವಳವೂರು, ತುಂಬೆ ಮಸೀದಿ ಅಧ್ಯಕ್ಷ ಇಮ್ತಿಯಾಜ್, ತುಂಬೆ ಗ್ರೂಪ್ ಇದರ ಕ್ಲಿನಿಕಲ್ ಸಿ.ಇ.ಓ ಡಾ.ಸದಾಶಿವ ಬಂಗೇರ, ಗ್ರಾಮ ಪಂಚಾಯತ್ ಮಾಜಿ ಸದಸ್ಯರ ಅಝೀಜ್, ಇಬ್ರಾಹಿಂ ವಳವೂರು ಹಾಗೂ ಸದಾಶಿವ ಡಿ. ತುಂಬೆ, ಮ್ಯಾಕ್ಸಿಂ ಕುವೆಲ್ಲೋ, ಇರ್ಫಾನ್,ಮೂಸಬ್ಬ, ಮೋನಪ್ಪ ಮಜಿ,ದೇವದಾಸ್,ಇಮ್ರಾನ್ ಮಾರಿಪಳ್ಳ, ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ರೈ ಬಿ., ಸಾಯಿರಾಮ್ ನಾಯಕ್ ಉಪಸ್ಥಿತರಿದ್ದರು. ತುಂಬೆ ಪ.ಪೂ ಕಾಲೇಜಿನ ಕಚೇರಿ ಅಧ್ಯಕ್ಷಕ ಬಿ ಅಬ್ದುಲ್ ಕಬೀರ್ ಸ್ವಾಗತಿಸಿ, ಪ್ರಾಂಶುಪಾಲ ದಿನೇಶ ಶೆಟ್ಟಿ ಎಂ. ವಂದಿಸಿದರು.

Leave a Comment