ವಿಶ್ವಮಾನವ ಡಾ॥ ರಾಜ್ ಕುಮಾರ್ ಸೇವಾ ಸಮಿತಿ ಮೈಸೂರು ಜಿಲ್ಲೆ ಇವರ ವತಿಯಿಂದ ಕರ್ನಾಟಕ ರತ್ನ ಪದ್ಮವಿಭೂಷಣ ಡಾ॥ ರಾಜ್ ಕುಮಾರ್ ಅವರ ಜನ್ಮದಿನ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ರಾಜ್ ಕರುನಾಡ ಕಣ್ಮಣಿ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಮೈಸೂರು ದಸರ ವಸ್ತುಪ್ರದರ್ಶನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಯಶಸ್ವಿನಿ ಸೋಮಶೇಖರ್ (ರಾಜಕೀಯ ಕ್ಷೇತ್ರ), ಶ್ರೀ ವಿ ಕುಮಾರಸ್ವಾಮಿ (ಸಮಾಜ ಸೇವಾ ಕ್ಷೇತ್ರ), ಶ್ರೀ ಎಂ ರವಿ ನಾಡನಹಳ್ಳಿ (ರಾಜಕೀಯ ಕ್ಷೇತ್ರ), ಶ್ರೀ ಜಯರಾಂ (ಸಂಗೀತ ಸೇವಾ ಕ್ಷೇತ್ರ), ಶ್ರೀ ಪ್ರಸನ್ನ ಕುಮಾರ್ (ಕನ್ನಡ ಸೇವಾ ಕ್ಷೇತ್ರ),ಶ್ರೀ ಜಯಸಿಂಹ (ಚಲನಚಿತ್ರ ಸೇವಾ ಕ್ಷೇತ್ರ), ಶ್ರೀ ತಿರುಮಲ ಯೋಗ ಪ್ರಕಾಶ್ (ಕ್ರೀಡಾ ಕ್ಷೇತ್ರ), ಶ್ರೀ ಮಹಾದೇವ ಸ್ವಾಮಿ (ಸಮಾಜ ಸೇವಾ ಕ್ಷೇತ್ರ), ಶ್ರೀರಾಜ್ ಮನೀಶ್ (ಕಲಾ ಕ್ಷೇತ್ರ), ಶ್ರೀ ಎಂ ರಮೇಶ್ (ಸಮಾಜ ಸೇವಾ ಕ್ಷೇತ್ರ) ಇವರಿಗೆ ಪ್ರಶಸ್ತಿ ನೀಡಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡರಾದ ಆರ್ ರಘು (ಕೌಟಿಲ್ಯ) ಅವರು ಡಾ. ರಾಜ್ ಕುಮಾರ್ ರವರ ಬದುಕಿನ ಪ್ರತಿ ಘಳಿಗೆಯು ಇಂದಿನ ಪೀಳಿಗೆಗೆ ಅಮೂಲ್ಯ ಸಂದೇಶ ನೀಡುತ್ತದೆ ಸರಳತೆಯ ಸಾಕಾರ ಮೂರ್ತಿ ಡಾಕ್ಟರ್ ರಾಜ್ ಕುಮಾರ್ ಅವರು ಅಭಿನಯಿಸದ ಪಾತ್ರವಿಲ್ಲ, ಪ್ರತಿ ಪಾತ್ರವೂ ಸಾಮಾಜಿಕ ವ್ಯವಸ್ಥೆಯ ಉತ್ತಮ ಜೀವನಕ್ಕೆ ಇಂಬು ನೀಡುವಂತಿದ್ದವು, ಹಾಗಾಗಿ ಈ ದಿನದ ಸುಸಂದರ್ಭದಲ್ಲಿ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸಲ್ಲಿಸಿರುವಂತಹ ಸಾಧಕರಿಗೆ
ಡಾ.ರಾಜ್ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ನಂತರ ಮಾತನಾಡಿದ ರಾಜ್ ಕುಮಾರ್ ರವರ ಒಡನಾಡಿ ಹಾಗೂ ಚಾಮರಾಜನಗರದ ಸಿಂಹ ಚಿತ್ರಮಂದಿರದ ಮಾಲೀಕರಾದ ಜಯಸಿಂಹ ರವರು ಅಣ್ಣಾ ವರೆಗೂ ಮತ್ತು ನಮಗೂ ಅವಿನಾಭಾವ ಸಂಬಂಧವಿತ್ತು ರಾಜಕುಮಾರ್ ರವರು ಅವರ ಯಾವುದೇ ಚಿತ್ರ ಬಿಡುಗಡೆಯಾದಾಗ ನಮ್ಮ ಚಿತ್ರಮಂದಿರಕ್ಕೆ ಬಂದು ವೀಕ್ಷಣೆ ಮಾಡುತ್ತಿದ್ದರು.ಅವರ ಜತೆ ಕಳೆದ ಸಮಯವು ಇಂದಿಗೂ ಮರೆಯಲಾಗದಂಥ ಸುಂದರ ಕ್ಷಣಗಳು.ನಮ್ಮಂಥ ಸಣ್ಣ ಸೇವಕರನ್ನು ಗುರುತಿಸಿ ಸಾಧಕರನ್ನಾಗಿ ಮಾಡಿ ಪ್ರಶಸ್ತಿ ವಿತರಿಸಿದ ಸಂಘದವರಿಗೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎ ಓ ಪ್ರದೀಪ್.ಮುಡಾ ಸದಸ್ಯರು ಲಕ್ಷ್ಮಿದೇವಿ .ಡಾ॥ ರಾಜ್ ಕುಮಾರ್ ಸಂಘದ ಸಂಸ್ಥಾಪಕರು ರಾಮೇಗೌಡ್ರು .ಸಮಾಜ ಸೇವಕರು ರಘುರಾಮ್ ವಾಜಪೇಯಿ ಯಶಸ್ವಿನಿ ಸೋಮಶೇಖರ್ .ಬಿಜೆಪಿ ಮುಖಂಡರಾದ ಡಿ ಲೋಹಿತ್ ವಿಶ್ವಮಾನವ ಡಾ॥ ರಾಜ್ ಕುಮಾರ್ ಸೇವಾ ಸಮಿತಿ .ಗೌರವ ಅಧ್ಯಕ್ಷ ರು. ರಾಘವೇಂದ್ರ ಅಧ್ಯಕ್ಷರು. ಸೇತುರಾಮ್ ಉಪಾಧ್ಯಕ್ಷರು ರಮೇಶ್ ಕಾರ್ಯಾಧ್ಯಕ್ಷರು ಹಾಗೂ ಖಜಾಂಚಿ ಸುಚೀಂದ್ರ .ಚಕ್ರಪಾಣಿ,ಮಂಜುನಾಥ್ ,ನಾಗಶ್ರೀ .ಸುರೇಶ್ ಗೋಲ್ಡ್ .ಮುಂತಾದವರು ಉಪಸ್ಥಿತರಿದ್ದರು.














