ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ₹2,500 ಹಣ ಪಡೆಯಲು 'ಗರ್ಭಕಂಠ ಕ್ಯಾನ್ಸರ್ ಲಸಿಕೆ' ಪಡೆಯುವುದು ಕಡ್ಡಾಯ!

Coastal Bulletin
ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ₹2,500 ಹಣ ಪಡೆಯಲು 'ಗರ್ಭಕಂಠ ಕ್ಯಾನ್ಸರ್ ಲಸಿಕೆ' ಪಡೆಯುವುದು ಕಡ್ಡಾಯ!

ನವದೆಹಲಿ: ದೆಹಲಿ ಸರ್ಕಾರ ಜಾರಿಗೆ ತರಲಿರುವ ‘ದೆಹಲಿ ಲಕ್ಷ್ಮೀ ಯೋಜನೆ’ಯಡಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು 2,500 ರು. ಆರ್ಥಿಕ ನೆರವು ಒದಗಿಸಲು ಹಲವು ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ. ಈ ಯೋಜನೆಯ ಲಾಭ ಪಡೆಯಲು ಕುಟುಂಬದ ಹೆಣ್ಣುಮಕ್ಕಳಿಗೆ ಹೆಚ್‌ಪಿವಿ ಲಸಿಕೆ ಹಾಕಿಸುವುದು, ಗರ್ಭಿಣಿಯರಿಗೆ ಪೋಷಣ್ ಟ್ರ್ಯಾಕರ್‌ನಲ್ಲಿ ನೋಂದಣಿ ಮತ್ತು ವೈಯಕ್ತಿಕ ಡೇಟಾ ಹಂಚಿಕೆಗೆ ಸಮ್ಮತಿ ನೀಡುವುದು ಸೇರಿದಂತೆ ವಿವಿಧ ಮಾನದಂಡಗಳನ್ನು ಕಡ್ಡಾಯಗೊಳಿಸಲಾಗಿದೆ.

ಪೋಷಣ್ ಟ್ರ್ಯಾಕರ್‌ನಲ್ಲಿ ನೋಂದಣಿ

ಯೋಜನೆಯ ಹೊಸ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಕುಟುಂಬದಲ್ಲಿ 14 ವರ್ಷಕ್ಕಿಂತ ಮೇಲ್ಪಟ್ಟ ಹೆಣ್ಣುಮಕ್ಕಳಿದ್ದರೆ, ಅವರಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಹೆಚ್‌ಪಿವಿ ಲಸಿಕೆ ಹಾಕಿಸಿರುವುದು ಕಡ್ಡಾಯವಾಗಿದೆ. ಇದರೊಂದಿಗೆ ಕುಟುಂಬದ ಇತರೆ ಮಕ್ಕಳಿಗೂ ನಿಗದಿತ ಲಸಿಕೆಗಳನ್ನು ನೀಡಿರಬೇಕು. ಗರ್ಭಿಣಿಯರು ಅಥವಾ ಹಾಲುಣಿಸುವ ತಾಯಂದಿರಿದ್ದಲ್ಲಿ ಅವರನ್ನು ಕೇಂದ್ರ ಸರ್ಕಾರದ ಪೋಷಣ್ ಟ್ರ್ಯಾಕರ್ ವೇದಿಕೆಯಲ್ಲಿ ನೋಂದಾಯಿಸಿರಬೇಕಾಗುತ್ತದೆ.

ಲಸಿಕೆ ಸುರಕ್ಷಿತವಲ್ಲ ಎಂಬ ತಪ್ಪು ಕಲ್ಪನೆ

ಎಚ್.ಪಿ.ವಿ. ಲಸಿಕೆ ಸುರಕ್ಷಿತವಾಗಿದ್ದು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 14-15 ವರ್ಷದೊಳಗಿನ

ಹೆಣ್ಣು ಮಕ್ಕಳಿಗೆ ನೀಡುವ ಉಚಿತ ಎಚ್.ಪಿ.ವಿ. ಲಸಿಕಾ ಅಭಿಯಾನವಾಗಿದೆ. ಈ ಕುರಿತು ಶಾಲೆಗಳಲ್ಲಿ ಸಭೆ ನಡೆಸುವ ಮೂಲಕ ಅಥವಾ ಇತರ ಇಲಾಖೆಗಳ ಸಹಕಾರದಿಂದ ಮಕ್ಕಳಿಂದಲೂ ಪೋಷಕರಿಗೆ ಮಾಹಿತಿ ನೀಡಬೇಕು. ಲಸಿಕೆ ಸುರಕ್ಷಿತವಲ್ಲ ಎಂಬ ತಪ್ಪು ಕಲ್ಪನೆ ಹೋಗಲಾಡಿಸಬೇಕು. ಎಚ್.ಪಿ.ವಿ. ಲಸಿಕೆಯ ಬಗ್ಗೆ ಪೋಷಕರು ಮಾಹಿತಿ ಕೊರತೆಯಿಂದ ಲಸಿಕೆ ಕೊಡಿಸಲು ನಿರಾಕರಿಸುತ್ತಿದ್ದು, ಲಸಿಕೆಯ ಅವಶ್ಯಕತೆ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಯುವ ಬಗ್ಗೆ ಸರಿಯಾದ ಅರಿವು ಮೂಡಿಸಬೇಕು. 35 ವರ್ಷ ಕಳೆದ ಮಹಿಳೆಯರು ಗರ್ಭಕಂಠದ ತಪಾಸಣೆ ಮಾಡಿಸುವುದರಿಂದ ಗರ್ಭಕಂಠದ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಳ್ಳಬಹುದು.

Leave a Comment