ಮೇಷ ರಾಶಿ : ವಾರದ ಆರಂಭದಲ್ಲೇ ಶುಭಸುದ್ದಿಯೊಂದನ್ನು ಕೇಳುವಿರಿ. ಇದು ನಿಮ್ಮ ವೃತ್ತಿ ಜೀವನಕ್ಕೆ ಒಂದು ತಿರುವನ್ನು ನೀಡುತ್ತದೆ. ತಂದೆ ಅಥವಾ ತಾಯಿಯ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ನಿಮ್ಮ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಹಾಗೆ ನಿಮಗೆ ಖುಷಿಕೊಡುವ ಸಂಗತಿ ಇದೆ.
ವೃಷಭ ರಾಶಿ : ಮಾನಸಿಕವಾಗಿ ಕೊಂಚ ಅಶಾಂತಿ ಇದೆ. ನೀವು ಮುಂದಿನ ಆಗುಹೋಗುಗಳ ಬಗ್ಗೆ ತೀವ್ರವಾಗಿ ಆಲೋಚಿಸುತ್ತೀರಿ. ಇದರಿಂದ ನಿಮಗೆ ಒತ್ತಡ ಗಲಿಬಿಲಿ ಎರಡೂ ಇರುತ್ತದೆ. ಮುಂದೆ ಆಗುವ ಕಾರ್ಯಕ್ಕೆ ಈಗಿನಿಂದಲೇ ತಯಾರಾಗುವ ಮಾನಸಿಕ ಸಿದ್ದತೆ ನಡೆಸುತ್ತೀರಿ. ಚಿಂತೆ ಬೇಡ. ಆಗುವ ಕಾಲಕ್ಕೆ ಎಲ್ಲವೂ ಒಳಿತೇ ಆಗುತ್ತದೆ.
ಮಿಥುನ ರಾಶಿ : ವೃತ್ತಿಯಲ್ಲಿ ಮತ್ತು ವೈಯುಕ್ತಿಕವಾಗಿ ಒತ್ತಡ ಇದ್ದರೂ ಗುರುಬಲ ಇರುವುದರಿಂದ ಎಲ್ಲವೂ ಸರಳವಾಗಿ ನಡೆದು ಹೋಗುತ್ತದೆ. ಮಕ್ಕಳಿಂದ ಖುಷಿ ಇದೆ. ಮಕ್ಕಳ ಬೆಳವಣಿಗೆ ನಿಮಗೆ ಸಂತೋಷ ಕೊಡುತ್ತದೆ. ಹೊಸ ಜವಾಬ್ದಾರಿಗಳು ಹೆಗಲೇರುವ ಸಮಯ. ಮಾನಸಿಕವಾಗಿ ಸಿದ್ಧರಾಗಿರಿ.
ಕಟಕ ರಾಶಿ : ಅಂದುಕೊಂಡ ಕೆಲಸಗಳೆಲ್ಲ ವೇಳೆಗೆ ಸರಿಯಾಗಿ ಆಗದೆ ಮನಸ್ಸಿಗೆ ಕಸಿವಿಸಿ. ಬೇಸರಿಸಬೇಡಿ. ಕೆಲವು ಸಲ ನಾವು ಎಂದುಕೊಳ್ಳುವುದೇ ಒಂದು ಆಗುವುದೇ ಒಂದು ಎಂಬಂತಾಗುತ್ತದೆ. ಈ ಕ್ಷಣಕ್ಕೆ ನಿಮ್ಮ ಕಾರ್ಯಗಳು ವ್ಯತಿರಿಕ್ತ ಪರಿಣಾಮ ಸೂಚಿಸಿದರೂ ಮುಂದೊಂದು ದಿನ ಇದೆ ನಿಮಗೆ ವರವಾಗಿ ಪರಿಣಮಿಸುತ್ತದೆ. ಕೆಲವು ಸಲ ತ್ವರಿತವಾಗಿ ಮಾಡಬೇಕೆಂದುಕೊಂಡ ಕೆಲಸಕ್ಕೆ ವಿಘ್ನ ಬರುವುದು ನಮಗೆ ಉಪಕಾರವೇ ಆಗುತ್ತದೆ.
ಸಿಂಹ ರಾಶಿ : ಗುರುಬಲ ಇದೆ. ಸೂರ್ಯ ಹಾಗೂ ಬುಧನೂ ನಿಮಗೆ ಸಹಕಾರ ನೀಡುತ್ತಾರೆ. ಆದರೂ ಏನೋ ಒಂದು ಕೊರಗು ಕೊರತೆ ನಿಮ್ಮನ್ನು ಕಾಡುತ್ತದೆ. ಆತ್ಮೀಯರ ನೆನಪು ಉಕ್ಕಿ ಬರುತ್ತದೆ. ಮನಸ್ಸು ಬಿಚ್ವಿ ಯಾರಲ್ಲಿಯೂ ಹೇಳಿಕೊಳ್ಳಲಾಗದ ತಾಕಲಾಟ. ಮನಸ್ಸಿನಲ್ಲೇ ಕೊರಗುತ್ತೀರಿ. ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ. ಹಣದ ಹರಿವೂ ಉತ್ತಮವಾಗಿದೆ ವೃತ್ತಿಯಲ್ಲಿ ಪ್ರಗತಿ ಇದೆ.
ಕನ್ಯಾ ರಾಶಿ : ಹಣ ಧಾರಾಳವಾಗಿ ಬರುತ್ತಿದೆ. ಮನಸ್ಸಿಗೆ ಖುಷಿ ಇದೆ. ವೃತ್ತಿಯಲ್ಲಿ ಹೊಸ ಹೊಸ ಯೋಜನೆಗಳು ಅದರ ಸಲುವಾಗಿ ಪ್ರವಾಸಗಳು ನಡೆಯುತ್ತವೆ. ಬಾನಿಗೆ ಹಾರಿ ನಕ್ಷತ್ರ ಹಿಡಿಯುವ ಉಮೇದು ಇದೆ. ವೃತ್ತಿ ಕ್ಷೇತ್ರದಲ್ಲಿ ಹೊಗಳಿಕೆ ಬಹುಮಾನ ಇವೆಲ್ಲ ಮನಸ್ಸಿಗೆ ಖುಷಿ
ಕೊಡುತ್ತದೆ. ಆದರೆ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.
ತುಲಾ ರಾಶಿ : ಸಭೆ ಸಮಾರಂಭಗಳಲ್ಲಿ ಆಹ್ವಾನ ಇದೆ. ವಿದ್ವತ್ ಜನರೆದುರು ಭಾಷಣ ಮಾಡುವ ಯೋಗ ವಿದ್ವತ್ ಸಭೆಗಳಲ್ಲಿ ಭಾಗವಹಿಸುವ ಅವಕಾಶಗಳು ಇದೆ. ನಿಮ್ಮ ಬುದ್ಧಿ ಜ್ಞಾನವನ್ನು ಇನ್ನಷ್ಟು ಹರಿತವಾಗಿಸುತ್ತೀರಿ. ಎಲ್ಲ ಕಡೆ ಗೌರವ ಮರ್ಯಾದೆಗಳನ್ನು ಹೊಂದುತ್ತೀರಿ. ಒಂಬತ್ತರ ಬುಧ ಸೂರ್ಯ ನಿಮ್ಮ ಕೀರ್ತಿಯನ್ನು ಇನ್ನಷ್ಟು ಪ್ರಜ್ವಲಗೊಳಿಸುತ್ತಾರೆ.
ವೃಶ್ಚಿಕ ರಾಶಿ : ನಿಮಗೆ ಈಗ ಎಲ್ಲ ಕಡೆಯಿಂದಲೂ ಸವಾಲುಗಳು. ನೀವು ಸವಾಲುಗಳಿಗೆ ಭಯಪಡುವುದಿಲ್ಲ. ಹಾಗಾಗಿ ಯಾವಾಗಲೂ ಒಂದಲ್ಲ ಒಂದು ಸವಾಲುಗಳು ಇದ್ದೇ ಇರುತ್ತದೆ. ನೀವು ಹುಟ್ಟು ಹೋರಾಟಗಾರರು. ಅದರಿಂದ ನೀವು ಎಂದೂ ಎದೆಗುಂದುವುದಿಲ್ಲ. ಹಾಗಾಗಿ ವೃತ್ತಿಯಲ್ಲಿ ಸಹ ಕಷ್ಟದ ಪ್ರಾಜೆಕ್ಟ್ ಸಿಕ್ಕರೂ ನಿಭಾಯಿಸುತ್ತೀರಿ. ಶತ್ರುಗಳ ಹುಟ್ಟಡಗಿಸುತ್ತೀರಿ.
ಧನಸ್ಸು ರಾಶಿ : ನೀವು ಸಮಸ್ಯೆಯ ನೇರ ಮುಖವನ್ನು ನೋಡದೆ ಮತ್ತೊಂದು ಮುಖವನ್ನೇ ಗಮನಿಸುವವರು. ಆದ್ದರಿಂದ ನಿಮಗೆ ಪ್ರತಿಯೊಂದರಲ್ಲೂ ಸಮಸ್ಯೆಯೇ ಕಾಣಿಸುತ್ತದೆ. ಸಮಸ್ಯೆ ಹುಟ್ಟುಹಾಕಿದರೆ ಸಾಲದು. ಅದನ್ನು ಪರಿಹಾರ ಮಾಡುವನಿಟ್ಟಿನಲ್ಲೂ ಯೋಚಿಸಬೇಕು. ಈಗ ನಿಮಗೆ ಗ್ರಹಗತಿ ಅನುಕೂಲವಾಗಿದೆ.
ಮಕರ ರಾಶಿ : ಯಾವುದನ್ನೂ ಬೇಗ ಒಪ್ಪದ ನೀವು ಪ್ರಮಾಣಿಕರಾಗಿದ್ದರೂ ಒಳ್ಳೆಯ ಫಲತಾಂಶಕ್ಕೆ ಅವಕಾಶಕ್ಕೆ ಕಾಯಬೇಕು. ಫಲಿತವು ಗಟ್ಟಿಯಾಗಿ ಕೈಗೆ ಬಂದು ಬೀಳುವವರೆಗೂ ಅನುಮಾನಿಸುತ್ತಿರುತ್ತೀರಿ. ನೀವು ಪ್ರಾಮಾಣಿಕರೆಂದು ಡಂಗುರ ಸಾರುವುದಿಲ್ಲ. ಯಾರ ವಕೀಲತ್ವವನ್ನು ಬಯಸುವುದಿಲ್ಲ.
ಕುಂಭ ರಾಶಿ : ಈಗ ನಿಮಗೆ ಶನಿ ರಾಶಿಯಲ್ಲೇ ಇದ್ದರೂ ಹೊಸ ಹೊಸ ಮನಸ್ಸಿಗೆ ಮುದಕೊಡುವ ಸಂಗತಿಗಳೂ ಇವೆ. ಖರ್ಚುಗಳು ತಲೆ ಕೆಡಿಸುತ್ತಿದ್ದರೂ ಆದಾಯವೂ ಚೆನ್ನಾಗಿದೆ. ಬಂದದನ್ನು ಎದುರಿಸುವ ಕೆಚ್ಚೂ ಇದೆ.
ಮೀನ ರಾಶಿ : ಹಣಕಾಸಿಗೆ ಕಷ್ಟವಿಲ್ಲ. ನೀವು ನಿಮ್ಮ ಸುಖ ಸಂತೋಷವನ್ನಷ್ಟೇ ಅಲ್ಲದೆ ನಿಮ್ಮ ಸುತ್ತಲೂ ಇರುವವರ ಸಂತೋಷವನ್ನೂ ಬಯಸುತ್ತೀರಿ. ಆತ್ಮೀಯರು ಸಂತೋಷವಾಗಿರಲು ನಿಮ್ಮ ಕೈಯಿಂದ ಹಣ ಖರ್ಚು ಮಾಡಲೂ ಹಿಂತೆಗೆಯುವವರಲ್ಲ. ಎಲ್ಲರ ಸಂತೋಷವೇ ನಿಮ್ಮ ಸಂತೋಷ.















