ಬಡಕಬೈಲ್ : ಅ.16ರಿಂದ 10ನೇ ವರ್ಷದ ‘ಭಜರಂಗಿ ಟೈಗರ್ಸ್’ ಹುಲಿವೇಷ ಸಂಭ್ರಮ

Coastal Bulletin
ಬಡಕಬೈಲ್ : ಅ.16ರಿಂದ 10ನೇ ವರ್ಷದ ‘ಭಜರಂಗಿ ಟೈಗರ್ಸ್’ ಹುಲಿವೇಷ ಸಂಭ್ರಮ

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದಸರಾ ಮಹೋತ್ಸವದ ಪ್ರಯುಕ್ತ ಹಿಂದೂ ಯುವ ತರುಣರು ಅಮ್ಮುಂಜೆ–ಬಡಕಬೈಲ್ ಮಣಿಕಂಠಪುರ ಇವರ ವತಿಯಿಂದ 10ನೇ ವರ್ಷದ ಹುಲಿವೇಷ ಸಂಭ್ರಮ ‘ಭಜರಂಗಿ ಟೈಗರ್ಸ್’ ಕಾರ್ಯಕ್ರಮವು ಅಕ್ಟೋಬರ್ 16ರಂದು ಶುಕ್ರವಾರ ಕೃಷ್ಣ ನಗರದಲ್ಲಿ ನಡೆಯಲಿದೆ.

ಅಂದು ಸಂಜೆ 6 ಗಂಟೆಗೆ ಕುಣಿತ ಭಜನೆ, ಸಂಜೆ 7 ಗಂಟೆಗೆ ಊದು ಪೂಜೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದೆ.

ಬಳಿಕ ಶಾರದಾ ಆರ್ಟ್ಸ್ ಕಲಾವಿದರಿಂದ ‘ಒಂತೆ ಲೇಟಾನ್ಡ್’ ನಾಟಕ ಪ್ರದರ್ಶನಗೊಳ್ಳಲಿದೆ.

ಅಕ್ಟೋಬರ್ 18ರಂದು ಭಾನುವಾರ ಬೆಳಗ್ಗೆ ಹುಲಿವೇಷ ಹೊರಡಲಿದ್ದು, ಅಕ್ಟೋಬರ್ 19ರಂದು ಸೋಮವಾರ ರಾತ್ರಿ ಜಳಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Comment