ಬಂಟ್ವಾಳ:ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ ) ತುಂಬೆ ಶ್ರೀರಾಮನಗರದ ರಾಮಲ್ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ 26ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ಅ.16 ಮತ್ತು 17ರಂದು ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ:
ಅ.15ರಂದು ಗುರುವಾರ ಸಂಜೆ ಗಂಟೆ 4-00ರಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ತುಂಬೆ ರಾಮಲ್ ಕಟ್ಟೆಯಿಂದ ತುಂಬೆ ಸೆಂಟರ್, ಬೊಳ್ಳಾರಿ, ಮುದಲೈ, ಮುಳಿಪಡ್ಡು, ಗಾಣದಲಚ್ಚಿಲ್, ಕೆಳಗಿನ ತುಂಬೆ, ಕಡೆಗೋಳಿ, ಪರ್ಲಕ್ಕೆ, ಮಜಿ ಮಾರ್ಗವಾಗಿ ಶ್ರೀ ಶಾರದಾ ಸಮುದಾಯ ಭವನಕ್ಕೆ ತಲುಪಲಿದೆ.
ಕಳೆದ 25 ವರ್ಷಗಳಿಂದ ಗ್ರಾಮದ ಏಕತೆ, ರಾಷ್ಟ್ರೀಯ ಪ್ರಜ್ಞೆ
ಹಾಗೂ ಸರ್ವರ ಒಗ್ಗೂಡುವಿಕೆಯ ಸಂಕೇತವಾಗಿ ಶಾರದಾ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ರಜತ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಶಾರದಾ ಸಮುದಾಯ ಭವನವನ್ನು ನಿರ್ಮಿಸಲಾಗಿದ್ದು, ಸಮಾಜದ ವಿವಿಧ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಮೂಲಕ ಸಾರ್ವಜನಿಕ ಸೇವೆ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.











