ಕೊಡ್ಮಾಣ್:38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ಚಾಲನೆ.

Coastal Bulletin
ಕೊಡ್ಮಾಣ್:38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ಚಾಲನೆ.

ಬಂಟ್ವಾಳ :ಶ್ರೀ ಶಾರದಾ ಪೂಜಾ ಸೇವಾ ವೇದಿಕೆ, ಕೊಡ್ಮಾಣ್ ಇದರ ಅಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ 38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಅ 16ರಂದು ಬೆಳಿಗ್ಗೆ ಸಮಯ 7.00ಕ್ಕೆ ಶ್ರೀ ಶಾರದಾ ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, ಮಹೋತ್ಸವದ ಉದ್ಘಾಟನೆ ಮತ್ತು ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಅನಂತ ಪದ್ಮನಾಭ ಭಟ್ ಅರ್ಚಕರು, ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಅತಿಥಿಗಳಾಗಿ ಗುಣಕರ ರಾಮದಾಸ ಅಧ್ಯಕ್ಷರು, ಇಸ್ಕಾನ್ ಮಂಗಳೂರು, ಜನಾರ್ಧನ ಬೊಂಡಾಲ, ಉಪಾಧ್ಯಕ್ಷರು, ಸಮಾಜಸೇವಾ ಸಹಕಾರಿ ಸಂಘ ನಿ., ಬಂಟ್ವಾಳ, ವಿಠಲ ಆಳ್ವ ಗರೋಡಿ ಕುಂಪಣಮಜಲು ಕಿರಣ್ ಕ್ಯಾಟರರ್ಸ್ ಫರಂಗಿಪೇಟೆ, ಪವನ್‌ಕುಮಾರ್ ಅಬ್ಬೆಟ್ಟು,ಉಪಾಧ್ಯಕ್ಷರು, ಫರಂಗಿಪೇಟೆ ಪ್ರಾಥಮಿಕ

ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಕೊಡ್ಮಾಣ್, ಸತೀಶ ನಾಯ್ಗ ಕೊಡ್ಮಾಣ್ ಕೊಡಿ, ಪದ್ಮನಾಭ ಶೆಟ್ಟಿ, ಕೊಟ್ಟಿಂಜ , ನವೀನ್ ನಾಯ್ಕ್ ಕೊಡ್ಮಾಣ್ ಕೊಡಿ  ಹರೀಶ್ ಕಲ್ಲಜಾಲ್,ರಮೇಶ್ ಬಂಗೇರ  ಸಹಿತ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಗೋಪಾಲ್ ಗೋವಿಂದೋಟ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು ಮನೋಜ್ ವಾಮಂಜೂರ್ರ್ ಕಾರ್ಯಕ್ರಮ  ನಿರೂಪಿಸಿದರು.

Leave a Comment