ಪುಟ್ಟ ವಯಸ್ಸಿನಲ್ಲೇ ದೊಡ್ಡ ಸಾಧನೆ: ಪ್ರದ್ಯಾ ಕುಲಾಲ್‌ಗೆ ‘IBR ಅಚೀವರ್’ ಗೌರವ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್‌ರಿಂದ ಅಭಿನಂದನೆ

Coastal Bulletin
ಪುಟ್ಟ ವಯಸ್ಸಿನಲ್ಲೇ ದೊಡ್ಡ ಸಾಧನೆ: ಪ್ರದ್ಯಾ ಕುಲಾಲ್‌ಗೆ ‘IBR ಅಚೀವರ್’ ಗೌರವ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್‌ರಿಂದ ಅಭಿನಂದನೆ

ಬಂಟ್ವಾಳ: ಎಳೆಯ ವಯಸ್ಸಿನಲ್ಲೇ ಅಪರೂಪದ ಪ್ರತಿಭೆ ಮೆರೆದ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಸಮೀಪದ ದೈಪಲ ನಿವಾಸಿ ಪ್ರದ್ಯಾ ವೈ. ಕುಲಾಲ್ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ‘IBR ಅಚೀವರ್’ ಗೌರವಕ್ಕೆ ಪಾತ್ರರಾಗಿದ್ದಾರೆ.


ಪ್ರದ್ಯಾ ಅವರ ಸಾಧನೆಯನ್ನು ಗುರುತಿಸಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಒಡ್ಡೂರು ಫಾರ್ಮ್‌ಹೌಸ್‌ನಲ್ಲಿರುವ ಶಾಸಕರ ನಿವಾಸದಲ್ಲಿ ಶಾಲು ಹೊದಿಸಿ ಅಭಿನಂದಿಸಿದರು.

ಬಿ.ಸಿ. ರೋಡ್ ಸಮೀಪದ ದೈಪಲ ನಿವಾಸಿಗಳಾದ ವಿಜಯಲಕ್ಷ್ಮಿ ಮತ್ತು ಯಾದವ ದಂಪತಿಯ ಕಿರಿಯ ಪುತ್ರಿ ಪ್ರದ್ಯಾ, ಎಸ್‌.ವಿ.ಎಸ್. ನರ್ಸರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ 2

ವರ್ಷ 9 ತಿಂಗಳ ವಯಸ್ಸಿನಲ್ಲಿಯೇ ಐದು ಮಂತ್ರಗಳನ್ನು ಪಠಿಸುವುದರ ಜೊತೆಗೆ ಕನ್ನಡ ಮತ್ತು ತುಳು ಭಾಷೆಗಳಲ್ಲಿ ನಾಲ್ಕು ಭಕ್ತಿಗೀತೆಗಳನ್ನು ಹಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಪ್ರದ್ಯಾ ಅವರ ಈ ಗಮನಾರ್ಹ ಸಾಧನೆಯನ್ನು 2026ರ ಆ.18ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದೃಢೀಕರಿಸಿದ್ದು, ಅವರಿಗೆ ‘IBR ಅಚೀವರ್’ ಗೌರವ ಲಭಿಸಿದೆ. ಎಳೆಯ ವಯಸ್ಸಿನಲ್ಲೇ ಸಾಧನೆ ಮೆರೆದಿರುವ ಪ್ರದ್ಯಾ ಅವರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Leave a Comment