ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ, ದಕ್ಷಿಣ ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ) , ಹಸಿರುದಳ ಬಿಜೈ ಮಂಗಳೂರು ಮಹಾನಗರ ಪಾಲಿಕೆ, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ , N.S.S ಬಿ.ಎ ಐ.ಟಿ.ಐ ತುಂಬೆ ಮತ್ತು ತುಂಬೆಯ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜು 18 ರಂದು ಬೆಳಿಗ್ಗೆ 7:30ಕ್ಕೆ ತುಂಬೆ ರಾಷ್ಟ್ರೀಯ ಹೆದ್ದಾರಿ ತುಂಬೆ ಜಂಕ್ಷನ್ ನಲ್ಲಿ ಸಂಪನ್ನಗೊಂಡು ತುಂಬೆ ಜಂಕ್ಷನ್ ನಿಂದ ಭಂಟರ ಭವನದವರೆಗೆ ಮತ್ತು ತುಂಬೆ ಜಂಕ್ಷನ್ ನಿಂದ ಕಡೆಗೋಳಿವರೆಗೆ ಬೃಹತ್ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರವೀಣ್ ಬಿ ತುಂಬೆ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಚ್ಚತೆ ಬಗ್ಗೆ ಜನ ಸಾಮಾನ್ಯರಿಗೆ ಜಾಗೃತಿಯನ್ನು ನೀಡಲಾಯಿತು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕರಾದ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ,, ತುಂಬೆ ಬಿ.ಎ ಐ.ಟಿ.ಐ ನ ಪ್ರಾಂಶುಪಾಲರಾದ ನವೀನ್ ಕುಮಾರ್ ಕೆ.ಎಸ್, ಹಸಿರು ದಳ ಮಂಗಳೂರು ಮಹಾ ನಗರ ಪಾಲಿಕೆಯ ನಾಗರಾಜ್ ಇವರುಗಳು ಸ್ವಚ್ಚತೆಯೆ ಬಗ್ಗೆ ಅರಿವು ಮೂಡಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತರಾದ ಸದಾಶಿವ ಡಿ ತುಂಬೆ , ಪಂಚಾಯತ್ ಉಪಾಧ್ಯಕ್ಷರಾದ ಜಯಂತಿ ಕೇಶವ, ಪಂಚಾಯತಿನ ಸದಸ್ಯರಾದ ಗಣೇಶ್ ಸಾಲಿಯಾನ್ , ಇಬ್ರಾಹಿಂ ವಳವೂರು,
ಹೇಮಲತಾ ಜಿ.ಪೂಜಾರಿ, ಜೆಸಿಂತಾ ಡಿಸೋಜ, ಶಶಿಕಲಾ ಮನೋಹರ ಕೊಟ್ಟಾರಿ, ಶ್ರೀಮತಿ ಪ್ರಭಾವತಿ, ಶ್ರೀಮತಿ ಪಾರ್ವತಿ, ಪಂಚಾಯತ್ ಸಿಬ್ಬಂದಿಯಾದ ಬಬಿತ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಪ್ರಭಾವತಿ, ಶ್ರೀಮತಿ ವಿಶಾಲಾಕ್ಷಿ , ಆದಂ ಸಲಾಂ, ಭಾಗ್ಯೋದಯ ಮಿತ್ರಕಲಾ ವೃಂದದ ಅಧ್ಯಕ್ಷರಾದ ಯಾದೇಶ್ ಸಾಲ್ಯಾನ್ , ಪ್ರಶಾಂತ್ ಕೊಟ್ಟಾರಿ, ಮನೋಹರ ಕೊಟ್ಟಾರಿ. ಸುದೀರ್ ಮುಳಿಕಂಡ, ಚರಣ್ ಕೋಡಿಯಡ್ಕ, ಮಹಾಬಲ ಮಜಿ, ಸಂಜೀತ್, ಅಶೋಕ್ ಕೊಂಡಾಣ, ಸಂದೀಪ್ ಮುದಲ್ಮೆ ಪ್ರಾನ್ಸಿಸ್ ಮುಳಿಪಡ್ಪು ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ತುಂಬೆ ಬಿ.ಎ ಐ.ಟಿ.ಐ ಪ್ರಾಧ್ಯಪಕರುಗಳು ಹಾಗೂ ವಿದ್ಯಾರ್ಥಿಗಳು ಸೇರಿ ಸುಮಾರು 180 ಕಾರ್ಯಕರ್ತರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತುಂಬೆ ಗ್ರಾಮವನ್ನು ಸ್ವಚ್ಚಗೊಳಿಸಿರುತ್ತಾರೆ.
















