ಉಚಿತ ಬಸ್, ದುಬಾರಿ ಡೀಸೆಲ್ ಹೊಡೆತ: ಕಾಸರಗೋಡಿನಲ್ಲಿ 10 ಖಾಸಗಿ ಬಸ್ ಸಂಚಾರಕ್ಕೆ ಹಾಕಲಿದೆ ಬ್ರೇಕ್!

Coastal Bulletin
ಉಚಿತ ಬಸ್, ದುಬಾರಿ ಡೀಸೆಲ್ ಹೊಡೆತ: ಕಾಸರಗೋಡಿನಲ್ಲಿ 10 ಖಾಸಗಿ ಬಸ್ ಸಂಚಾರಕ್ಕೆ ಹಾಕಲಿದೆ ಬ್ರೇಕ್!

ಕಾಸರಗೋಡು: ಮಹಿಳೆಯರಿಗೆ ಕೆಎಸ್‌ಆರ್‌ಟಿಸಿಯಲ್ಲಿ ‘ಪ್ರಿಯದರ್ಶಿನಿ’ ಉಚಿತ ಪ್ರಯಾಣ ಯೋಜನೆ ಜಾರಿ ಹಾಗೂ ಏರುತ್ತಿರುವ ಡೀಸೆಲ್ ಬೆಲೆ ಖಾಸಗಿ ಬಸ್ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ನಷ್ಟ ತಾಳಲಾರದೆ ಜಿಲ್ಲೆಯ 10 ಖಾಸಗಿ ಬಸ್ ಮಾಲಕರು ಜೂನ್ 30ರಿಂದ ಬಸ್ ಓಡಾಟ ನಿಲ್ಲಿಸಲು ನಿರ್ಧರಿಸಿ ಆರ್‌ಟಿಒಗೆ ‘ಜಿ-ಫಾರ್ಮ್’ ಸಲ್ಲಿಸಿದ್ದಾರೆ.

ಏನಿದು ಜಿ-ಫಾರ್ಮ್?

ಬಸ್ ಸಂಚಾರ ನಿಲ್ಲಿಸಿದ ಅವಧಿಗೆ ರಸ್ತೆ ತೆರಿಗೆ ಕಟ್ಟಬೇಕಾಗಿಲ್ಲ. ಹೀಗಾಗಿ ನಷ್ಟದಲ್ಲಿರುವ ಬಸ್ ಮಾಲಕರು ಸಾರಿಗೆ ಇಲಾಖೆಗೆ ಜಿ-ಫಾರ್ಮ್ ನೀಡಿ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸುತ್ತಾರೆ. ಪ್ರಸ್ತುತ ಪಾವತಿಸಿರುವ ತ್ರೈಮಾಸಿಕ ರಸ್ತೆ ತೆರಿಗೆ ಜೂನ್ 30ಕ್ಕೆ ಮುಗಿಯುವುದರಿಂದ, ಅಂದೇ ಈ 10 ಬಸ್‌ಗಳ ಚಕ್ರ ನಿಲ್ಲಲಿದೆ.

ಮಾಲಕರ ಅಳಲು  

“ಕೆಎಸ್‌ಆರ್‌ಟಿಸಿಯಲ್ಲಿ ಉಚಿತ ಪ್ರಯಾಣದಿಂದ ಪ್ರಯಾಣಿಕರೇ ಇಲ್ಲ.

ಜೊತೆಗೆ ಡೀಸೆಲ್ ದರ ದಿನೇ ದಿನೇ ಜಾಸ್ತಿ. ಡ್ರೈವರ್ ಸಂಬಳ, ಮೆಂಟೆನೆನ್ಸ್ ಕೊಡೋಕೂ ಆಗ್ತಿಲ್ಲ” ಎನ್ನುತ್ತಾರೆ ಬಸ್ ಮಾಲಕರು.

ಮುಂದಿನ ಆತಂಕ

ಸದ್ಯ ಜಿಲ್ಲೆಯಲ್ಲಿ 480 ಖಾಸಗಿ ಬಸ್‌ಗಳು ರಸ್ತೆಗಿಳಿಯುತ್ತಿವೆ. ತ್ರೈಮಾಸಿಕ ತೆರಿಗೆ ಕಟ್ಟಲು ಜೂನ್ 30 ಕೊನೆ ದಿನ. ನಷ್ಟ ಮುಂದುವರಿದರೆ ಇನ್ನಷ್ಟು ಬಸ್‌ಗಳು ಜಿ-ಫಾರ್ಮ್ ಹಾದಿ ಹಿಡಿಯುವ ಸಾಧ್ಯತೆ ಇದೆ ಎಂದು ಮಾಲಕರ ಸಂಘ ಎಚ್ಚರಿಸಿದೆ.

Leave a Comment