ಪೈವಳಿಕೆ: ಮುಂಡೋಲಿ-ಕಲ್ಲಗದ್ದೆ ರಸ್ತೆ ದುರಸ್ತಿಗೆ "ನಮ್ಮ ಊರು ನಮ್ಮ ರೋಡ್" ಸಮಿತಿ ರಚನೆ

Coastal Bulletin
ಪೈವಳಿಕೆ: ಮುಂಡೋಲಿ-ಕಲ್ಲಗದ್ದೆ ರಸ್ತೆ ದುರಸ್ತಿಗೆ "ನಮ್ಮ ಊರು ನಮ್ಮ ರೋಡ್" ಸಮಿತಿ ರಚನೆ

ಪೈವಳಿಕೆ, ಆ.24:* ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೋಲಿಯಿಂದ ಕಲ್ಲಗದ್ದೆವರೆಗಿನ ಸುಮಾರು 5 ಕಿ.ಮೀ ರಸ್ತೆಯ ದುರಸ್ತಿಗೆ ಆಗ್ರಹಿಸಿ "ನಮ್ಮ ಊರು ನಮ್ಮ ರೋಡ್" ಎಂಬ ಹೆಸರಿನಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಗಿದೆ.

ದಿನಾಂಕ 23-08-2026 ರಂದು ಬಾಯಾರು ಪ್ರದೇಶದ ಗ್ರಾಮಸ್ಥರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸುದೆಂಬಳ, ಕಲ್ಲಗದ್ದೆ, ನೀರ್ಚಾಲು, ದಳಿಕುಕ್ಕು ಗ್ರಾಮಗಳ ಸುಮಾರು 2000ಕ್ಕೂ ಹೆಚ್ಚು ನಿವಾಸಿಗಳಿಗೆ ಈ ರಸ್ತೆಯೇ ಮುಖ್ಯ ಸಂಪರ್ಕ ಮಾರ್ಗವಾಗಿದ್ದು, ಕಳೆದ 2-3 ವರ್ಷಗಳಿಂದ ರಸ್ತೆಯು ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗಿದೆ. ತುರ್ತು ವಾಹನಗಳು ಮತ್ತು ಶಾಲಾ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ನೂತನ ಸಮಿತಿಯ ಪದಾಧಿಕಾರಿಗಳು:

ಅಧ್ಯಕ್ಷರು: ಗಣೇಶ್ ಕುಲಾಲ್

ಉಪಾಧ್ಯಕ್ಷರು: ಮಾಧವ ಪಾಟಾಳಿ ಪೇಲತ್ತಡ್ಕ

ಕಾರ್ಯದರ್ಶಿ: ಸುಲೈಮಾನ್

ಜೊತೆ ಕಾರ್ಯದರ್ಶಿಗಳು: ಶಿವಪ್ರಸಾದ್ ಪೇಲತ್ತಡ್ಕ, ಇಬ್ರಾಹಿಂ ಕುಲ್ಯಾರ್, ಧನಂಜಯ ಚೆನ್ನಯ ಮೂಲ

ಕೋಶಾಧಿಕಾರಿ: ಮೋಹನ

ಹೊಳ್ಳ ಬದಿಯಾರು

ಜೊತೆ ಕೋಶಾಧಿಕಾರಿ: ಪ್ರಜ್ವಲ್ ದಳಿಕುಕ್ಕು


ಇಂದು (23-08-2026) ಸಮಿತಿಯ ಸದಸ್ಯರು ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಭೇಟಿ ಮಾಡಿ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದರು. ಪಂಚಾಯತ್ ಬೋರ್ಡ್ ಸಭೆಯಲ್ಲಿ ಈ ವಿಷಯ ಮಂಡಿಸಿ, ಸಂಬಂಧಪಟ್ಟ ಇಲಾಖೆಯಿಂದ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ಅಧ್ಯಕ್ಷರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಗಣೇಶ್ ಕುಲಾಲ್, ಕಾರ್ಯದರ್ಶಿ ಸುಲೈಮಾನ್, ವಾರ್ಡ್ ಸದಸ್ಯ ರಾಮ ಏದರ್ ಉಪಸ್ಥಿತರಿದ್ದರು.

30 ದಿನಗಳ ಒಳಗೆ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸದಿದ್ದರೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment