ಫರಂಗಿಪೇಟೆ :ಕೋಸ್ಟಲ್  ಫಿಲ್ಮ್ಸ್ ತಂಡದಿಂದ ವೇಷಧಾರಣೆಯ ಮೂಲಕ ಮಾನವೀಯ ಸೇವೆ: ₹1.08 ಲಕ್ಷಕ್ಕೂ ಅಧಿಕ ಸಹಾಯಧನ ಸಂಗ್ರಹ. ಆರೋಗ್ಯ ಚಿಕಿತ್ಸೆಗೆ ನೆರವು.

Coastal Bulletin
ಫರಂಗಿಪೇಟೆ :ಕೋಸ್ಟಲ್  ಫಿಲ್ಮ್ಸ್ ತಂಡದಿಂದ ವೇಷಧಾರಣೆಯ ಮೂಲಕ ಮಾನವೀಯ ಸೇವೆ: ₹1.08 ಲಕ್ಷಕ್ಕೂ ಅಧಿಕ ಸಹಾಯಧನ ಸಂಗ್ರಹ. ಆರೋಗ್ಯ ಚಿಕಿತ್ಸೆಗೆ ನೆರವು.

ಬಂಟ್ವಾಳ :ಫರಂಗಿಪೇಟೆಯ ಕೋಸ್ಟಲ್ ಫಿಲ್ಮ್ಸ್  ತಂಡದ ಸದಸ್ಯರು ವಿಶೇಷ ವೇಷಧಾರಣೆಯ ಮೂಲಕ ಕೈಗೊಂಡ ಸೇವಾ ಕಾರ್ಯವು ಸಾರ್ವಜನಿಕರ ಪ್ರೀತಿ, ಆಶೀರ್ವಾದ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ಸೇವಾ ಕಾರ್ಯದ ಮೂಲಕ ಒಟ್ಟು ₹1,08,023 ಸಹಾಯಧನ ಸಂಗ್ರಹಿಸಿ, ಇಬ್ಬರ ಚಿಕಿತ್ಸೆಗೆ ನೆರವು ನೀಡಲಾಗಿದೆ.

ಸಂಗ್ರಹವಾದ ಸಹಾಯಧನದಲ್ಲಿ ಆರು ತಿಂಗಳ ಪುಟ್ಟ ಮಗುವಿನ ಚಿಕಿತ್ಸೆಗೆ ₹51,013 ಹಾಗೂ ತಂಡದಲ್ಲಿ ನಟಿಸಿದ ನಟಿಯ ಆರೋಗ್ಯ ಚಿಕಿತ್ಸೆಗೆ ₹57,010 ನೀಡಲಾಗಿದೆ.

ಇದರೊಂದಿಗೆ, ತಾಸೆದ ಪೆಟ್ಟ್  ಕಾರ್ಯಕ್ರಮದ ರೂವಾರಿ ವಿಕ್ಕಿ ಪೂಜಾರಿಯವರಲ್ಲಿ ಮನವಿ ಮಾಡಿಕೊಂಡ ಮೇರೆಗೆ, ಅವರ ಸಹಕಾರದಿಂದ ಮಗುವಿನ ಚಿಕಿತ್ಸೆಗೆ ಹೆಚ್ಚುವರಿಯಾಗಿ ₹25,000 ಸಹಾಯಧನವನ್ನೂ

ಒದಗಿಸಲಾಗಿದೆ.

ಕೇವಲ ವಿಶೇಷ ವೇಷಧಾರಣೆಗೆ ಸೀಮಿತವಾಗದೆ, ಸಂಕಷ್ಟದಲ್ಲಿರುವ ಎರಡು ಕುಟುಂಬಗಳ ನೋವಿಗೆ ಸ್ಪಂದಿಸುವ ಮೂಲಕ ಕೋಸ್ಟಲ್ ಫಿಲ್ಮ್ಸ್   ತಂಡ ಮಾನವೀಯತೆಯ ಸೇವಾ ಕಾರ್ಯಕ್ಕೆ ಮಾದರಿಯಾಗಿದೆ.ವೇಷ ಬದಲಿಸಿದ್ದು ರೂಪವನ್ನು ಮಾತ್ರ, ಆದರೆ ಉದ್ದೇಶ ಒಂದೇ—ಕಷ್ಟದಲ್ಲಿರುವವರ ಮುಖದಲ್ಲಿ ನಗು ಮೂಡಿಸುವುದು ಎಂಬ ತಂಡದ ಆಶಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Comment