ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಅರ್ಕುಳ ಶ್ರೀರಾಮ ವಿದ್ಯಾ ಸಂಸ್ಥೆ ಯಲ್ಲಿ ೨೦೨೬ -೨೦೨೭ ಸಾಲಿನ ಯಕ್ಷ ಶಿಕ್ಷಣ ತರಗತಿಯನ್ನು ಉದ್ಘಾಟಿಸಲಾಯಿತು . ಕಳೆದನಾಲ್ಕು ವರ್ಷಗಳಿಂದ ನಿರಂತರವಾಗಿ ಯಕ್ಷ ಶಿಕ್ಷಣವನ್ನು ಶ್ರೀರಾಮ ವಿದ್ಯಾ ಸಂಸ್ಥೆ ಯಲ್ಲಿ ವಿದ್ಯಾರ್ಥಿಗಳಿಗೆ ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ವತಿಯಿಂದ ನಡೆಸಿಕೊಂಡು ಬರುತ್ತಿದ್ದು, ಒಂದು ಬಾರಿ ಯಕ್ಷ ಗಾನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ವನ್ನು ಪಡೆದಿರುತ್ತದೆ
ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎ ಕೆ ಜಯರಾಮ ಶೇಕ ರವರು ಅಧ್ಯಕ್ಷತೆ ವಹಿಸಿಕೊಂಡಿದ್ದರು , ಶಾಲಾ ಸಂಚಾಲಕರಾದ ಎ ಗೋವಿಂದ ಶೆಣೈ , ಯಕ್ಷ ದ್ರುವ ಪಟ್ಲ ಫೌಂಡೇಷನ್ ನ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ದಿವಾಕರ
ಶೆಟ್ಟಿ ಪರಾರಿ ಗುತ್ತು , ಯಕ್ಷಗಾನ ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆ , ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ ಉಪಸ್ಥಿತರಿದ್ದರು
ಶಾಲಾ ಮುಖ್ಯಸ್ಥರಾದ ದೇವದಾಸ ಕೆ ಆರ್ ಕೊಡ್ಮಾಣ್ ಸ್ವಾಗತಿಸಿದರು ,ಶಾಲಾ ಶಿಕ್ಷಕರಾದ ರಕ್ಷಿತ್ ರವರು ನಿರೂಪಿಸಿ ವಂದಿಸಿದರು.















