Coastal Bulletin

ಬಂಟ್ವಾಳ :ಸಮಾಜದ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರದ ಕೊಡುಗೆ ಅನನ್ಯವಾದುದು,ಸಹಕಾರಿ ಚಳುವಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಯ ಕ್ರಾಂತಿಗೆ ಪ್ರೇರಣೆಯಾಗಿದೆ.ಬಂಟ್ವಾಳ ತಾಲೂಕಿನಲ್ಲಿ ಸಹಕಾರಿ ಚಳುವಳಿಗೆ ಹಿರಿಯ ಸಹಕಾರಿಗಳ ದೊಡ್ಡ ಮಟ್ಟದ ಕೊಡುಗೆ ಇದೆ, ಎಲ್ಲಾ ವರ್ಗದ ಜನರನ್ನು ಸುಲಭವಾಗಿ ಮುಟ್ಟಿದ ಕ್ಷೇತ್ರವೆಂದರೆ ಅದು ಸಹಕಾರಿ ಕ್ಷೇತ್ರ, ಸಹಕಾರಿ ಸಂಸ್ಥೆಗಳ ವ್ಯವಹಾರ ಪಾರದರ್ಶಕವಾಗಿದ್ದರೆ ಸಂಸ್ಥೆ ಯಶಸ್ವಿಯಾಗುತ್ತದೆ, ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರಿ ಸಂಘದಲ್ಲಿ ಸಿಗುವ ಸೌಲಭ್ಯಗಳ ಪ್ರಯೋಜನವನ್ನು ಪಡೆಯಿರಿ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.

ಅವರು ಕಡೆಗೋಳಿಯ ಸಾಯಿ ಕಾಂಪ್ಲೆಕ್ಸ್ನಲ್ಲಿ ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ( ನಿ.)ಇದರ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭ ಅಧ್ಯಕ್ಷತೆಯನ್ನು ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮಲ್ಲಿಕಾ ವಿ ಶೆಟ್ಟಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕೃಷ್ಣ ಕುಮಾರ್ ಪೂಂಜ,ಆಡಳಿತ ಟ್ರಸ್ಟಿ ಸೇವಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಪ್ರವೀಣ್ ಬಿ ತುಂಬೆ,ಅಧ್ಯಕ್ಷರು ಗ್ರಾ ಪಂ ತುಂಬೆ, ಚಂದ್ರಪ್ರಕಾಶ ಶೆಟ್ಟಿ,ಮಾಜಿ ಸದಸ್ಯರು ಜಿಲ್ಲಾ

ಪಂಚಾಯತ್,ಸುಬ್ರಮಣ್ಯ ಭಟ್ ಅಧ್ಯಕ್ಷರು ಫರಂಗಿಪೇಟೆ ವಿ ಎಸ್ ಎಸ್ ಬ್ಯಾಂಕ್, ಎನ್ ಜೆ ಗೋಪಾಲ್ ಸಹಕಾರಿ ಅಭಿವೃದ್ಧಿ ಅಧಿಕಾರಿ,ವಿನಯ್ ಕುಮಾರ್ ಕಡೆಗೋಳಿ ಕಟ್ಟಡ ಮಾಲೀಕರು, ಅಜಯ್ ಕುಮಾರ್ ಅಜಿಲ ಮುಖ್ಯಕಾರ್ಯನಿರ್ವಾಹಕಧಿಕಾರಿ, ಕೇಶವ ಕಿಣಿ ವಲಯ ಮೇಲ್ವಿಚಾರಕರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಉಪಾಧ್ಯಕ್ಷರಾದ ಅಲ್ವಿನ್ ವಿನಯ್ ಲೋಬೊ ಸ್ವಾಗತಿಸಿ, ನಿರ್ದೇಶಕರಾದ ಸುರೇಶ ಭಂಡಾರಿ ಅರ್ಬಿ ಧನ್ಯವಾದವಿತ್ತರು. ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Leave a Comment