ಲೊರೆಟ್ಟೋ ಹಿಲ್ಸ್ : ರೋಟರಿ ಕ್ಲಬ್ಬಿಗೆ 'ಡೈಮಂಡ್ ಪ್ಲಸ್ ಪ್ರಶಸ್ತಿ'

Coastal Bulletin
ಲೊರೆಟ್ಟೋ ಹಿಲ್ಸ್ : ರೋಟರಿ ಕ್ಲಬ್ಬಿಗೆ 'ಡೈಮಂಡ್ ಪ್ಲಸ್ ಪ್ರಶಸ್ತಿ'

ಬಂಟ್ವಾಳ: ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಕಳೆದ ಸಾಲಿನಲ್ಲಿ ನಡೆಸಿದ ರೋಟರಿ ಇಮೇಜ್ ವೃದ್ಧಿ ಜೊತೆಗೆ ಸಾಮಾಜಿಕ ಸೇವಾ ಚಟುವಟಿಕೆ ಮತ್ತು ರೋಟರಿ ಸಂಸ್ಥೆಗೆ ನೀಡಿದ ಟಿ ಆರ್ ಎಫ್- ಪೋಲಿಯೋ ಫಂಡ್ ಮತ್ತಿತರ ಕೊಡುಗೆ ಹಿನ್ನೆಲೆಯಲ್ಲಿ ರೋಟರಿ ಅಂತರ್ ರಾಷ್ಟ್ರೀಯ ಜಿಲ್ಲೆ 3181 ಮಟ್ಟದಲ್ಲಿ 'ಡೈಮಂಡ್ ಪ್ಲಸ್' ಪ್ರಶಸ್ತಿ ಗಳಿಸಿದೆ.

ಮೈಸೂರಿನಲ್ಲಿ ನಡೆದ ಎರಡು ದಿನಗಳ 'ಅನುಬಂಧ ಪ್ರಶಸ್ತಿ ಪ್ರದಾನ' ಕಾರ್ಯಕ್ರಮದಲ್ಲಿ ರೋಟರಿ ಅಂತರ್ ರಾಷ್ಟ್ರೀಯ ಜಿಲ್ಲೆ 3181 ಮಟ್ಟದಲ್ಲಿ 'ಡೈಮಂಡ್ ಪ್ಲಸ್' ಪ್ರಶಸ್ತಿ ದೊರೆತಿದೆ. ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ., ನಿಯೋಜಿತ ಗವರ್ನರ್ ಸತೀಶ್ ಬೋಳಾರ್, ಮಾಜಿ ಗವರ್ನರ್ ವಿಕ್ರಂ ದತ್ತ ಇವರಿ ಪ್ರಶಸ್ತಿ ಪ್ರದಾನ ನೆರವೇರಿಸಿದರು.

ಇದೇ ವೇಳೆ ಹಿರಿಯ ಸದಸ್ಯ ಕೆ.ರಮೇಶ್ ನಾಯಕ್ ರಾಯಿ ಇವರಿಗೆ 'ಶೈಕ್ಷಣಿಕ ಪುರಸ್ಕಾರ' ಪ್ರಶಸ್ತಿ ನೀಡಿ

ಗೌರವಿಸಲಾಯಿತು.

ಸಹಾಯಕ ಗವರ್ನರ್ ಉಮೇಶ್ ರಾವ್ ಮಿಜಾರು, ನಿಯೋಜಿತ ಗವರ್ನರ್ ಶ್ರುತಿ ಮಾಡ್ತಾ, ಕ್ಲಬ್ಬಿನ ಅಧ್ಯಕ್ಷ ವಿಜಯ ಫೆನರ್ಾಂಡಿಸ್, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಮಾಜಿ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್, ನಿಯೋಜಿತ ಅಧ್ಯಕ್ಷೆ ಗೀತಾ ಪಿ.ಬಲ್ಲಾಳ್, ಸದಸ್ಯರಾದ ರಾಜೇಶ್ ಶೆಟ್ಟಿ ಸೀತಾಳ, ಸೆಬೆಸ್ಟಿನ್ ಮಿನೇಜಸ್, ರೂಪಾ ರಾಜೇಶ್ ಶೆಟ್ಟಿ, ಪ್ರೀತಾ ಆಂಟೊನಿ ಸಿಕ್ವೇರ, ಡಾ.ಕ್ಲಾರೆಟ್ ಸಂತೋಷ್ ಡಿಸೋಜ ಮತ್ತಿತರರು ಇದ್ದರು.


Leave a Comment