ಬಂಟ್ವಾಳ : ತಾಲೂಕಿನ ಬೆಂಜನಪದವು ವಿವಿಧೋದ್ದೇಶ ಸಹಕಾರ ಸಂಘದ ಸ್ವರ್ಣ ಸಂಭ್ರಮಾಚರಣೆ ಸಮಾರಂಭವು ನ 15ರಂದು ರವಿವಾರ ವಿಜೃಂಭಣೆಯಿಂದ ನಡೆಯಿತು
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಘದ ಸ್ವರ್ಣ ಸಂಭ್ರಮದ ಸ್ಮರಣ ಸಂಚಿಕೆ ‘ಕಾಲದ ಹೆಜ್ಜೆ’ಯನ್ನು ಬಿಡುಗಡೆಗೊಳಿಸಿದ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಮಾತನಾಡಿ, ಸಹಕಾರ, ಸಹಬಾಳ್ವೆ ಮತ್ತು ಸಹಚಿಂತನೆಯ ಭಾಗವಾಗಿರುವ ಸಹಕಾರಿ ಸಂಘಗಳು ಜನರ ಸೇವೆಗೆ ಸದಾ ಸಿದ್ಧವಾಗಿರಬೇಕು.ನಿರಂತರ ಶ್ರಮ ಮತ್ತು ಬದ್ಧತೆಯಿಂದ ಮಾತ್ರ ಸಹಕಾರಿ ಸಂಸ್ಥೆಗಳನ್ನು ಮುನ್ನಡೆಸಲು ಸಾಧ್ಯ ಉತ್ತಮ ಸಾಧನೆ ಮಾಡುವುದರ ಜೊತೆಗೆ ರೈತರು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿಯನ್ನೂ ಹೊಂದಿರಬೇಕು ಎಂದು ಹೇಳಿದರು.
ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ,“ಸಹಕಾರಿ ಕ್ಷೇತ್ರವನ್ನು ಮುನ್ನಡೆಸುವುದು ಇಂದಿನ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ. ಹಲವು ಸವಾಲುಗಳ ನಡುವೆಯೂ ಉತ್ತಮ ಸಾಧನೆಯೊಂದಿಗೆ ಮುನ್ನಡೆಯುತ್ತಿರುವುದು
ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮೆಡಿಕಲ್ ಲ್ಯಾಬೋರೋಟರಿ ಪರೀಕ್ಷೆಯಲ್ಲಿ ಬಂಗಾರದ ಪದಕ ವಿಜೇತೆ ಕು ದಿಶಾ ಬೆಂಜನಪದವು ಇವರನ್ನು ಗೌರವಿಸಿ ಅಭಿನಂದಿಸಲಾಯಿತು ಹಾಗೂ ಸಂಘದ ಸಿ ಇ ಒ ಎಡ್ವರ್ಡ್ ಫೆರ್ನಾಂಡಿಸ್ ರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಚಂದ್ರಶೇಖರ ಭಂಡಾರಿ ಅಮ್ಮುಂಜೆ ,ಉದ್ಯಮಿ ನವಾಜ್ ಬಡಕಬೈಲು, ಜ್ಯೋತಿಷಿ ಅನಿಲ್ ಪಂಡಿತ್,ಉದ್ಯಮಿ ಜೈಸನ್ ಮೊಂತೆರೋ,ರಾಜ ಬಂಟ್ವಾಳ, ಸಂಘದ ಅಧ್ಯಕ್ಷ ವಿಜಯ್ ಡಿ ಸೋಜ ಉಪಾಧ್ಯಕ್ಷ ಸಂತೋಷ್ ರೂಢಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿ,ಆಶೇಲ್ ಧನ್ಯವಾದವಿತ್ತು, ಹೆಚ್ ಕೆ ನೈನಾಡ್ ಕಾರ್ಯಕ್ರಮ ನಿರೂಪಿಸಿದರು.
ಸ್ವರ್ಣ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ನೃತ್ಯ- ಗಾನ- ಸಂಭ್ರಮ,ಯಕ್ಷ ನಾಟ್ಯ ವೈಭವ,ಹಾಗೂ ಎನ್ನ ಫ್ಯಾಮಿಲಿ ನಾಟಕ ಪ್ರದರ್ಶನಗೊಂಡಿತು.









