breaking news

ಫರಂಗಿಪೇಟೆ: ಸೇವಾಂಜಲಿಯಲ್ಲಿ 139ನೇ ರಕ್ತದಾನ ಶಿಬಿರ. ನಿರಂತರ ರಕ್ತದಾನ ಶಿಬಿರ ಆಯೋಜಿಸುವುದು ಶ್ರೇಷ್ಠ ಸೇವೆ: ಜಗನ್ನಾಥ್ ಚೌಟ ಬದಿಗುಡ್ಡೆ

Coastal Bulletin
ಫರಂಗಿಪೇಟೆ: ಸೇವಾಂಜಲಿಯಲ್ಲಿ 139ನೇ ರಕ್ತದಾನ ಶಿಬಿರ. ನಿರಂತರ ರಕ್ತದಾನ ಶಿಬಿರ ಆಯೋಜಿಸುವುದು ಶ್ರೇಷ್ಠ ಸೇವೆ: ಜಗನ್ನಾಥ್ ಚೌಟ ಬದಿಗುಡ್ಡೆ

ಬಂಟ್ವಾಳ: ನಿರಂತರವಾಗಿ ರಕ್ತದಾನ  ಶಿಬಿರವನ್ನು ಆಯೋಜಿಸುವುದು ಶ್ರೇಷ್ಠ ಕೆಲಸ. ಕೃಷ್ಣಕುಮಾರ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಸಂಸ್ಥೆ ಒಂದು ತಂಡದೊಂದಿಗೆ ಈ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ್ ಚೌಟ ಬದಿಗುಡ್ಡೆ ಹೇಳಿದರು

ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ ಇದರ ಆಶ್ರಯದಲ್ಲಿ ಎ.ಜೆ. ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಭಾನುವಾರ ನಡೆದ 139ನೇ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಒಂದು ಯುನಿಟ್ ರಕ್ತವನ್ನು ವರ್ಗಿಕರಣ ಮಾಡಿ ನಾಲ್ಕು ಮಂದಿ ರೋಗಿಗಳಿಗೆ ಕೊಡುವ ವ್ಯವಸ್ಥೆ ಇದೆ. ಉತ್ತಮ ಸೇವೆ ನೀಡುವ ಹಿನ್ನಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದ. ಕ. ಜಿಲ್ಲೆಗೆ ಉತ್ತಮ ಹೆಸರಿದೆ ಎಂದು ತಿಳಿಸಿದರು.

ಕಲಾವಿದ ಸದಾಶಿವ ಡಿ ತುಂಬೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸ್ವ ಇಚ್ಛೆ  ಹಾಗೂ ಫಲಾಪೇಕ್ಷೆ ಇಲ್ಲದೆ ಮಾಡುವಂತಹ ರಕ್ತದಾನ ಸೇವೆ ಅತ್ಯಂತ ಶ್ರೇಷ್ಠವಾದದ್ದು ಎಂದು ತಿಳಿಸಿದರು.

ಪ್ರಗತಿಪ

ಕೃಷಿಕ ಡೊನಾಲ್ಡ್ ಡಿಸೋಜ ಕೊಡ್ಮನ್ ಕೋಡಿ

ಉದ್ಯಮಿ ಮನೋಹರ್ ನಾಯ್ಕ್, ಎ.ಜೆ ಆಸ್ಪತ್ರೆ ಬ್ಲಡ್ ಬ್ಯಾಂಕಿನ ರೇಷ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಪ್ರಸ್ತಾವಿಕವಾಗಿ ಮಾತನಾಡಿದರು.

ಪ್ರಮುಖರಾದ ಎಂ. ಸುರೇಶ ಚಂದ್ರ ಶೆಟ್ಟಿ, ತಾರಾನಾಥ್ ಕೊಟ್ಟರಿ ತೇವು, ಪ್ರಶಾಂತ್ ತುಂಬೆ, ತನುಷ್ ಶೆಟ್ಟಿ, ಪ್ರವೀಣ್ ಕಬೇಲಾ,ಪ್ರಮೋದ್ ಕಬೇಲಾ, ನೀಲನ್ ಡಿಸೋಜಾ , ದಿನೇಶ್ ತುಂಬೆ

ಶಿವರಾಜ್ ಸುಜಿರ್, ಚಂದ್ರಹಾಸ್ ಕಡೆಗೋಳಿ, ಶೇಖರ ಪೂಜಾರಿ ಕಲ್ಲತಡಮೆ, ಮಧುರಾಜ್ ಶೆಟ್ಟಿ ಜನಾರ್ಧನ್, ಪ್ರಸಾದ್ ಕೆಸನಮೊಗರು ವಿದ್ಯಾ ಸುಜಿರ್, ಗಾಯತ್ರಿ,ಶೋಭಾ ಕಳ್ಳಿಗೆ, ಸಾರಮ್ಮ ಮೊಯಿದೀನ್ ಮತ್ತಿತರರು ಉಪಸಿತರಿದ್ದರು.ಶಿಬಿರದಲ್ಲಿ 52 ಯುನಿಟ್ ರಕ್ತ ಸಂಗ್ರಹವಾಯಿತು.

Leave a Comment