breaking news

ಬೆಂಜನಪದವು: ವಿವಿಧೋದ್ದೇಶ ಸಹಕಾರ ಸಂಘದ ಸ್ವರ್ಣ ಸಂಭ್ರಮಾಚರಣೆ ಉದ್ಘಾಟನೆ. ರೈತರ ಹಿತಾಸಕ್ತಿಗೆ ಸಹಕಾರಿ ಸಂಸ್ಥೆಗಳು ಆದ್ಯತೆ ನೀಡಲಿ: ಡಾ. ತುಕಾರಾಮ್ ಪೂಜಾರಿ

Coastal Bulletin
ಬೆಂಜನಪದವು: ವಿವಿಧೋದ್ದೇಶ ಸಹಕಾರ ಸಂಘದ ಸ್ವರ್ಣ ಸಂಭ್ರಮಾಚರಣೆ ಉದ್ಘಾಟನೆ. ರೈತರ ಹಿತಾಸಕ್ತಿಗೆ ಸಹಕಾರಿ ಸಂಸ್ಥೆಗಳು ಆದ್ಯತೆ ನೀಡಲಿ: ಡಾ. ತುಕಾರಾಮ್ ಪೂಜಾರಿ

ಬಂಟ್ವಾಳ: ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಹಾಗೂ ನಿಗದಿತ ಬೆಲೆ ದೊರೆಯುವಂತಾಗಬೇಕು. ರೈತರಿಗೆ ನ್ಯಾಯಯುತ ಬೆಲೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿರುವ ಪರಿಸ್ಥಿತಿಯನ್ನು ಬದಲಾಯಿಸಲು ಸಹಕಾರಿ ಸಂಸ್ಥೆಗಳು ಚಿಂತನೆ ನಡೆಸಬೇಕು ಎಂದು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಪ್ರತಿಷ್ಠಾನದ ಅಧ್ಯಕ್ಷ ಡಾ. ತುಕಾರಾಮ್ ಪೂಜಾರಿ ಹೇಳಿದರು.


ಅವರು ನ 15ರಂದು ರವಿವಾರ ಬೆಂಜನಪದವು ವಿವಿಧೋದ್ದೇಶ ಸಹಕಾರ ಸಂಘದ ಸ್ವರ್ಣ ಸಂಭ್ರಮಾಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಪ್ರಕೃತಿಗೆ ಪೂರಕವಾಗಿ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು. ಕೃಷಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಗಮನಹರಿಸಬೇಕು. ಗ್ರಾಹಕರು ಹಾಗೂ ಕೃಷಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆ ತರಬಹುದು ಎಂಬುದನ್ನು ಸಹಕಾರಿ ಸಂಸ್ಥೆಗಳು ಆಲೋಚಿಸಬೇಕು ಜೀವನದಲ್ಲಿ ಆರ್ಥಿಕ ಶಿಸ್ತನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದರು .

ವಂದನೀಯ ಫಾ। ಅಂಟ್ಯನಿ ಲೋಬೊ, ಧರ್ಮಗುರುಗಳು, ತೊಡಂಬಿಲ ಚರ್ಚ್, ಪೂಜ್ಯ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಅಧ್ಯಕ್ಷರು, ತಪೋವನ ಪೊಳಲಿ,ಆರೀಫ್ ಅನ್ಸಾರಿ, ಖತೀಬರು, ಸಯ್ಯದ್ ಹಸನ್ ಹೈದ್ರೋಸ್ ಜುಮಾ ಮಸೀದಿ ಉದ್ದಬೆಟ್ಟು ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ

ಮಾಜಿ ಸಚಿವ ಬಿ ರಮಾನಾಥ ರೈ, ಮಂಗಳೂರು ಉಪ ವಿಭಾಗ ಸಹಕಾರ ಸಂಘಗಳ ಉಪನಿಬಂಧಕರು ತ್ರಿವೇಣಿ ರಾವ್, ಗೋವಿನತೋಟ ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಪ್ರಭುಜೀ,ಮಾಣಿ ಗ್ರಾ ಪಂ ನಿಕಟಪೂರ್ವ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,ಬಂಟ್ವಾಳ ಕ್ಯಾಥೋಲಿಕ್ ಸಭಾ ಅಧ್ಯಕ್ಷ ಅಲ್ಪೊನ್ಸ್  ಫೆರ್ನಾಂಡಿಸ್, ಮಂಗಳೂರು ಐ ಎ ಎಸ್ ಸ್ಕೂಲ್ ಸಂಸ್ಥಾಪಕ ಸಂತೋಷ್ ರಾವ್,ಬಂಟ್ವಾಳ ಪುರಸಭೆಯ ನಿಕಟಪೂರ್ವ ಅಧ್ಯಕ್ಷ ವಾಸು ಪೂಜಾರಿ ಲೋರಟ್ಟೋ,  ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ,ಉದ್ಯಮಿ ಚಂದ್ರಹಾಸ ಪಲ್ಲಿಪಾಡಿ, ಬೆಂಜನಪದವು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಿಜಯ್ ಡಿ ಸೋಜ, ಹಾಗೂ ಆಡಳಿತ ಮಂಡಳಿಯ ಎಲ್ಲಾ  ಸದಸ್ಯರು ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿ,ಫೇಲಿಕ್ಸ್ ಡೇಸಾ ಧನ್ಯವಾದವಿತ್ತು,ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು

Leave a Comment