ಬಂಟ್ವಾಳ:ತಾಲೂಕಿನ ಬೆಂಜನಪದವು ವಿವಿಧೋದ್ದೇಶ ಸಹಕಾರ ಸಂಘ (ನಿ.) ಇದರ 50ನೇ ವರ್ಷದ ಸ್ವರ್ಣ ಸಂಭ್ರಮ ಕಾರ್ಯಕ್ರಮವು ನವೆಂಬರ್ 15ರ ಭಾನುವಾರ ಬೆಂಜನಪದವಿನಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಅಂದು ಬೆಳಿಗ್ಗೆ 10.30ಕ್ಕೆ ಸ್ವರ್ಣ ಸಂಭ್ರಮದ ಉದ್ಘಾಟನಾ ಸಮಾರಂಭ ಹಾಗೂ ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ವಂದನೀಯ ಫಾ। ಅಂಟ್ಯನಿ ಲೋಬೊ, ಧರ್ಮಗುರುಗಳು, ತೊಡಂಬಿಲ ಚರ್ಚ್,
ಪೂಜ್ಯ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಅಧ್ಯಕ್ಷರು, ತಪೋವನ ಪೊಳಲಿ,ಆರೀಫ್ ಅನ್ಸಾರಿ, ಖತೀಬರು, ಸಯ್ಯದ್ ಹಸನ್ ಹೈದ್ರೋಸ್ ಜುಮಾ ಮಸೀದಿ ಉದ್ದಬೆಟ್ಟು ಇವರು ಆಶೀರ್ವಾಚನ ನೀಡಲಿದ್ದು, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಅರೋಗ್ಯ ಸಚಿವ ಯು ಟಿ ಖಾದರ್, ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ ಸಹಿತ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ವಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು
ರಂಜಿಸಲಿವೆ.
ಮಧ್ಯಾಹ್ನ 12 ಗಂಟೆಯಿಂದ ಬಿ.ಸಿ.ರೋಡ್‌ನ ಎಕ್ಸ್‌ಟ್ರೀಮ್ ಡ್ಯಾನ್ಸ್ ಕ್ರೂ ತಂಡದಿಂದ ನೃತ್ಯ-ಗಾನ ಸಂಭ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ಚಂಡಮೇಳದೊಂದಿಗೆ ತೆಂಕುತಿಟ್ಟು ಮತ್ತು ಬಡಗುತಿಟ್ಟು ತಂಡದವರಿಂದ ಯಕ್ಷ ನಾಟ್ಯ ವೈಭವ ಪ್ರದರ್ಶನಗೊಳ್ಳಲಿದೆ.
ರಾತ್ರಿ 8.30ರಿಂದ ಮಂಜೇಶ್ವರದ ಶಾರದಾ ಆರ್ಟ್ ಕಲಾವಿದರಿಂದ ಹಾಸ್ಯಮಯ ತುಳು ನಾಟಕ 'ಎನ್ನ ಫ್ಯಾಮಿಲಿ' ಪ್ರದರ್ಶನಗೊಳ್ಳಲಿದೆ.
ಸಹಕಾರ ಕ್ಷೇತ್ರದಲ್ಲಿ ಐದು ದಶಕಗಳ ಸೇವೆಯ ಮೈಲಿಗಲ್ಲಿನ ಸಂಭ್ರಮದ ಈ ಕಾರ್ಯಕ್ರಮಕ್ಕೆ ಎಲ್ಲರೂ ಆತ್ಮೀಯವಾಗಿ ಆಗಮಿಸಬೇಕೆಂದು ಸಂಘದ ಅಧ್ಯಕ್ಷ ವಿಜಯ್ ಡಿಸೋಜ ಪಚ್ಚಿನಡ್ಕ ಹಾಗೂ ಸಿ ಇ ಒ ಎಡ್ವರ್ಡ್ ಫೆರ್ನಾಂಡಿಸ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









