ಬಂಟ್ವಾಳ: ಮಯೂರ ಪ್ರತಿಷ್ಠಾನ (ರಿ.), ಮಂಗಳೂರು ಇದರ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ‘ಮಯೂರ ಯಾನ – 2’ ಕಾರ್ಯಕ್ರಮವನ್ನು ನವೆಂಬರ್ 14ರಂದು ಶನಿವಾರ ಕುಡುಪಿನ ಶ್ರೀ ಅನಂತಪದ್ಮನಾಭ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.
ಅಂದು ಸಂಜೆ 6 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಯೂರ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಪಿ. ಸದಾಶಿವ ಐತಾಳ್ ವಹಿಸಲಿದ್ದಾರೆ. ಅನಂತಪದ್ಮನಾಭ ದೇವಸ್ಥಾನದ ತಂತ್ರಿಗಳಾದ ವೇ. ಮೂ. ಕೃಷ್ಣರಾಜ ತಂತ್ರಿಗಳು ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮುಖಂಡರಾದ ರವೀಂದ್ರ ನಾಯಕ್ ಕೆ., ವಿ ಇನ್ಫ್ರಾ ಕನ್ಸ್ಟ್ರಕ್ಷನ್ಸ್ & ಬಿಲ್ಡರ್ಸ್ನ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್ ಕುಮಾರ್ ಶೆಟ್ಟಿ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಲಯನ್ ರಮಾನಂದ ನೂಜಿಪ್ಪಾಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶ್ರೀ ಅನಂತಪದ್ಮನಾಭ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಮೊಕ್ತೇಸರರಾದ ಭಾಸ್ಕರ್ ಕೆ., ಅರ್ಚಕರು ಹಾಗೂ ಅನುವಂಶಿಕ ಮೊಕ್ತೇಸರರಾದ ಮನೋಹರ ಭಟ್ ಕುಡುಪು, ಅನುವಂಶಿಕ ಪವಿತ್ರಪಾಣಿ ಹಾಗೂ ಅನುವಂಶಿಕ ಮೊಕ್ತೇಸರರಾದ ಕೆ. ಬಾಲಕೃಷ್ಣ ಕಾರಂತ್ ಘನ ಉಪಸ್ಥಿತಿ ವಹಿಸಲಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಪ್ರಮುಖರಾದ ಸಂದೇಶ್ ಶೆಟ್ಟಿ ಹಾಗೂ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಪುಂಜಾಲಕಟ್ಟೆ ಘಟಕದ ಅಧ್ಯಕ್ಷರಾದ ಹರೀಂದ್ರ ಟಿ. ಪೈ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಸಂಜೆ 7 ಗಂಟೆಯಿಂದ ಯಕ್ಷಗುರು ರಕ್ಷಿತ್ ಶೆಟ್ಟಿ
ಪಡ್ರೆ ಅವರ ನಿರ್ದೇಶನದಲ್ಲಿ ಮಯೂರ ಪ್ರತಿಷ್ಠಾನದ ಕಲಾವಿದರಿಂದ ‘ಪೀಯೂಷಲಹರಿ – ತ್ರಿಪಥಗಾಮಿನಿ ಮೋಕ್ಷದಾಯಿನಿ’ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ಸತೀಶ್ ಶೆಟ್ಟಿ ಪಟ್ಲ, ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ ಭಟ್ ಕಲ್ಲಡ್ಕ, ವಿಶ್ವಾಸ್ ಭಟ್ ಕರ್ಬೆಟ್ಟು, ಚೈತನ್ಯ ಕೃಷ್ಣ ಪದ್ಯಾಣ, ರೋಹಿತ್ ಉಚ್ಚಿಲ, ಸುಬ್ರಹ್ಮಣ್ಯ ಚಿತ್ರಾಪುರ, ವರುಣ್ ಹೆಬ್ಬಾರ್, ಉಮೇಶ್ ಆಚಾರ್ಯ ಹಾಗೂ ರವಿ ಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ.
ಮುಮ್ಮೇಳದಲ್ಲಿ ನಾಗೇಶ್ ಬೈಲೂರು, ಪ್ರಥಮ ಮೂಡಿತ್ತಾಯ, ಪೂಜಾ ಆಚಾರ್ಯ, ಪ್ರಶಾಂತ್ ಐತಾಳ್, ಸ್ವಸ್ತಿಶ್ರೀ ಸಾಮಗ, ಪ್ರಣವ ಮೂಡಿತ್ತಾಯ, ರಜತ್ ಬೋಳ, ಶ್ರವಣ್ ಉಡುಪ, ಅನ್ವೇಷ್ ಶೆಟ್ಟಿ, ಧನುಷ್ ಜೋಗಿ, ಅಜೇಯ ಸುಬ್ರಹ್ಮಣ್ಯ, ಅಭಿಷೇಕ್ ಶೆಟ್ಟಿಗಾರ್, ವರುಣ್ ಆಚಾರ್ಯ, ಶ್ರೀಕೃಷ್ಣ ರಾವ್, ಸುಪ್ರೀತಾ ಐತಾಳ್, ಸಮರ್ಥ್ ಉಡುಪ, ಕೀರ್ತನ್, ಸೇಜಲ್, ಪ್ರಸಾದ್ ಪ್ರಭು, ಅಭಿಜ್ಞಾ ಸರಸ್ವತಿ, ಚಿರಾಗ್, ಉದ್ಭವ್, ನಂದಿತಾ, ರಾಶಿ ಬಲಿಪಗುಳಿ ಹಾಗೂ ಜಶ್ವಿತಾ ಕಾವೂರು ಕಲಾವಿದರಾಗಿ ಅಭಿನಯಿಸಲಿದ್ದಾರೆ.
ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆ ಹಾಗೂ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯೋಜಿಸಿರುವ ಈ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಮಯೂರ ಪ್ರತಿಷ್ಠಾನದ ಪದಾಧಿಕಾರಿಗಳು ವಿನಂತಿಸಿದ್ದಾರೆ.









