ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕದ ವತಿಯಿಂದ ದೀಪಾವಳಿ ಕುಟುಂಬ ಸಹಮಿಲನ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಬಿ.ಸಿ.ರೋಡಿನ ಅಕ್ಷಯ ಸೌಧದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್‌ಸಿಐ ರಾಷ್ಟ್ರೀಯ ಉಪಾಧ್ಯಕ್ಷೆ ಅಕ್ಷತಾ ಮಾತನಾಡಿ, ಬಂಟ್ವಾಳ ಘಟಕವು ಉತ್ತಮ ಸೇವಾ ಕಾರ್ಯಗಳ ಮೂಲಕ ಗುರುತಿಸಿಕೊಂಡಿದೆ. ಘಟಕದ ಮಾಜಿ ಅಧ್ಯಕ್ಷ ಡಾ. ಆನಂದ ಬಂಜನ್ ಹಾಗೂ ಸೀನಿಯರ್ ಆದಿರಾಜ್ ಜೈನ್ ಅವರಿಗೆ ಪಿಪಿಎಫ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ದೀಪಾವಳಿ ಹಬ್ಬದ ಐತಿಹಾಸಿಕ ಹಿನ್ನೆಲೆ ಹಾಗೂ ವಿಶ್ವದಾದ್ಯಂತ ಆಚರಿಸಲ್ಪಡುವ ಬೆಳಕಿನ ಹಬ್ಬದ ವಿಶೇಷತೆಯ ಕುರಿತು ಬಂಟ್ವಾಳ ತಾಲೂಕು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ನ್ಯಾಯವಾದಿ ರವೀಂದ್ರ ಕುಕ್ಕಾಜೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ಎಸ್‌ಸಿಐ ಸದಸ್ಯರೂ ಆಗಿರುವ ವರ್ತಕರ ವಿವಿಧೋದ್ದೇಶ ಸಹಕಾರ
ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಹಿರಿಯ ರಾಜಕಾರಣಿ ಹಾಗೂ ಸಾಮಾಜಿಕ ಕಾರ್ಯಕರ್ತ ಪಿ.ಎ. ರಹೀಂ ಮತ್ತು ಜೀ ಕನ್ನಡ ನ್ಯೂಸ್ ಕರ್ನಾಟಕ ಐಡಲ್ 2026 ಪ್ರಶಸ್ತಿ ಪುರಸ್ಕೃತ ಸದಾನಂದ ಬಂಗೇರ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಲೀಜನ್ ಅಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ಅಧ್ಯಕ್ಷತೆ ವಹಿಸಿ ಎಲ್ಲರನ್ನು ಅಭಿನಂದಿಸಿದರು.
ಕೋಶಾಧಿಕಾರಿ ಮೊಹಮ್ಮದ್, ಸಹಕಾರ್ಯದರ್ಶಿ ಸನ್ಮತಿ ಇಂದ್ರ, ಸದಸ್ಯರಾದ ದೇವಪ್ಪ ಕುಲಾಲ್, ಕರುಣೇಂದ್ರ ಪೂಜಾರಿ, ಶಿಕ್ಷಕ ರಾಮಕೃಷ್ಣ ರಾವ್, ಯೋಗೀಶ್ ಬಂಗೇರ, ಹರಿಶ್ಚಂದ್ರ ಆಳ್ವ, ರಾಜಾರಾಮ ಐತಾಳ್, ಗಿರಿಧರ ಗೌಡ, ಮೋಹನದಾಸ್ ಕೊಟ್ಟಾರಿ, ಪ್ರಮೀಳಾ ಮಾಣೂರು, ಸುಜಾತ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಜಯಗಣೇಶ ನಿರೂಪಿಸಿ, ಕಾರ್ಯದರ್ಶಿ ರೇಖಾ ರಾವ್ ವಂದಿಸಿದರು.









