ಬಂಟ್ವಾಳ :ಸಿದ್ದಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಪಟಾಣಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಎಲ್ಲಾ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.
ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಬಹುಮಾನ ವಿತರಿಸಿ ಮಾತನಾಡಿ ಅಂಗನವಾಡಿಯ ಪುಟಾಣಿ ಮಕ್ಕಳು ದೇವರಿಗೆ ಸಮಾನ, ಬಾಲ್ಯದಲ್ಲಿ ಮಕ್ಕಳು ಏನೂ ಮಾಡಿದರರೂ ಪೋಷಕರು ಮಕ್ಕಳನ್ನು ಬೆದರಿಸದೆ ಪ್ರೀತಿ ವಾತ್ಸಲ್ಯದಿಂದ ಕಾಣಬೇಕು ಇದರಿಂದ ತಂದೆ, ತಾಯಿಯೊಂದಿಗೆ ಮಕ್ಕಳು ನಿರಂತರವಾಗಿ ಪ್ರೇಮದಿಂದ ಇರಲು ಸಾಧ್ಯ ಎಂದರು.
ಸಿದ್ದಕಟ್ಟೆಯ
ಉದ್ಯಮಿ ರೋ/ನೋಣಯ ಶೆಟ್ಟಿಗಾರ್ ಶುಭ ಹಾರೈಸಿ ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ಸದಸ್ಯ ವೈಭವ್ ಮೆಡಿಕಲ್ ನ ಮಾಲಕರಾದ ಸಚ್ಚಿದಾನಂದ ಭಟ್ ಕೊಡಮಾಡಿದ ಪ್ರೊಟೀನ್ ಕಿಟ್ ಅಂಗನವಾಡಿ ಕಾರ್ಯಕರ್ತೆ ಸರಸ್ವತಿಯವರಿಗೆ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯರಾದ ಅಶೋಕ್ ಆಚಾರ್ಯ, ಅಂಗನವಾಡಿ ಸಹಾಯಕಿ ಶಾರದಾ, ಮಕ್ಕಳ ಪೋಷಕರು, ಬಾಲವಿಕಾಸ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.









