Coastal Bulletin

ತಾ.27-6-2021ರಿಂದ 03-07-2021ರ ವರೆಗೆ

ಮೇಷ

ನಿಮ್ಮ ವ್ಯವಹಾರಗಳ ಗುಟ್ಟನ್ನು ಯಾರಿಗೂ ತಿಳಿಸದೆ ಇರುವುದು ಬಹಳ ಉತ್ತಮ. ಹೊಸ ವ್ಯಾಪಾರದ ಯೋಜನೆಯನ್ನು ಬಹಳ ಎಚ್ಚರಿಕೆಯಿಂದ ಗೌಪ್ಯವಾಗಿ ತಯಾರಿಸಿರಿ.

ವೃಷಭ

ಆಪ್ತ ಗೆಳೆಯರ ನಡುವೆ ಸಣ್ಣ ವಿಚಾರಕ್ಕಾಗಿ ನಿಷ್ಟೂರ ಬರುವ ಸಾಧ್ಯತೆಗಳಿವೆ. ವೈದ್ಯವೃತ್ತಿಯವರಿಗೆ ಕೆಲಸದ ಒತ್ತಡ ಹೆಚ್ಚು ಇರುತ್ತದೆ.

 ಕಟಕ

ದೂರ ಪ್ರಯಾಣದಿಂದ ಉಂಟಾದ ಆಯಾಸದಿಂದ ಚೇತರಿಸಿಕೊಳ್ಳುವಿರಿ. ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕೆಲವು ಕಠಿಣ ಪರಿಸ್ಥಿತಿಗಳು ಎದುರಾಗಬಹುದು

ಮಿಥುನ

ನಿಮ್ಮ ಮೇಲೆ ಬಂದಿದ್ದ ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಯಶಸ್ವಿಯನ್ನು ಕಾಣುವಿರಿ. ಒಳಾಂಗಣ ವಿನ್ಯಾಸಕಾರರಿಗೆ ಹೆಚ್ಚಿನ ಕೆಲಸ ದೊರೆತು ಹೆಚ್ಚಿನ ಲಾಭವಾಗುತ್ತದೆ.

ಸಿಂಹ

ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ. ಸರ್ಕಾರಿ ನೌಕರರಿಗೆ ಮೇಲಧಿಕಾರಿಗಳ ಕಿರುಕುಳ ಹೆಚ್ಚಾಗಬಹುದು. ಮಕ್ಕಳ ಪ್ರಗತಿಯು ನಿರೀಕ್ಷೆಯ ಮಟ್ಟಕ್ಕಿಂತ ಹೆಚ್ಚಿಗೆ ಇರುತ್ತದೆ

 ಕನ್ಯಾ

ರಾಜಕಾರಣಿಗಳಿಗೆ ತಮ್ಮ ಹೇಳಿಕೆಯಿಂದ ಮುಜುಗರವುಂಟಾಗುವ ಸಂದರ್ಭವಿದೆ. ಸಾಮಾಜಿಕ ಕಾರ್ಯಕರ್ತರುಗಳಿಗೆ ಅನಿರೀಕ್ಷಿತ ಗೌರವ ದೊರೆಯುವ

ಸಂದರ್ಭವಿದೆ

ತುಲಾ

ನಿಮ್ಮ ಸಂತೋಷದ ವಿಚಾರಗಳಲ್ಲಿ ಕುಟುಂಬದ ಸಹಕಾರ ಖಂಡಿತ ದೊರೆಯುತ್ತದೆ. ಸಮಾಜ ಸೇವೆಯನ್ನು ಮಾಡುವವರಿಗೆ ಸಾಫಲ್ಯತೆಯ ನೆಮ್ಮದಿ ದೊರೆಯುತ್ತದೆ

 ವೃಶ್ಚಿಕ

ಮನೆಗೆ ಸತ್ಪುರುಷರ ಆಗಮನವಾಗಲಿದೆ. ಮನೆಯಲ್ಲಿ ದೈವತಾ ಕಾರ್ಯಗಳು ನಡೆಯುವ ಎಲ್ಲಾ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಉನ್ನತಿಯಾಗಿ ಧನಲಾಭ ಬರುತ್ತದೆ.

ಧನು

ಕಾರ್ಯಯೋಜನೆಗಳಲ್ಲಿ ನೀವು ಮಾಡುವ ಬದಲಾವಣೆಗಳು ಸಕಾರಾತ್ಮಕ ಫಲಿತಾಂಶವನ್ನು ಕೊಡುತ್ತದೆ. ಸಮಾಧಾನ ಚಿತ್ತದಿಂದ ಚಿಂತಿಸಿ ಆರ್ಥಿಕ ಸುಧಾರಣೆಯನ್ನು ಸರಿದಾರಿಗೆ ತರಬಹುದು.

ಮಕರ

ಕಠಿಣ ಪರಿಶ್ರಮದಿಂದ ಕಾರ್ಯದಲ್ಲಿ ಯಶಸ್ಸನ್ನು ಪಡೆಯುವಿರಿ, ಎದುರಾಳಿಗಳ ತೊಂದರೆ ಇದ್ದರೂ ಸಹ ಅದನ್ನು ಎದುರಿಸಿ ಮುನ್ನಡೆಯುವಿರಿ

ಕುಂಭ

ಹಿರಿಯರು ದೀನದಲಿತರಿಗೆ ಸಹಾಯಮಾಡಿ ಸಂತೋಷಪಡುವರು. ಆರ್ಥಿಕ ಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡಿ ಮುನ್ನಡೆಯಿರಿ. ಯುವಕರಿಗೆ ಉದ್ಯೋಗ ನಷ್ಟದ ಪರಿಸ್ಥಿತಿ ಬರಬಹುದು.

ಮೀನ

ನಿಮ್ಮ ಮನಸ್ಸಿನ ದುಗುಡವನ್ನು ಆಪ್ತರ ಬಳಿ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುವಿರಿ. ನವೀನ ರೀತಿಯ ವಸ್ತ್ರ ವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ

Leave a Comment