ಬಿ ಸಿ ರೋಡ್:ದಿಗ್ಬ್ರಮೆ ಹುಟ್ಟಿಸಿದ ಯುವತಿಯ ಭೀಕರ ಹತ್ಯೆ

Coastal Bulletin
ಬಿ ಸಿ ರೋಡ್:ದಿಗ್ಬ್ರಮೆ ಹುಟ್ಟಿಸಿದ ಯುವತಿಯ ಭೀಕರ ಹತ್ಯೆ

ಬಂಟ್ವಾಳ :ಬಿ ಸಿ ರೋಡಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಾಡು ಹಗಲೇ ಯುವಕನೊಬ್ಬ ರಾಜಾರೋಷವಾಗಿ ಯುವತಿಯೊಬ್ಬಳ್ಳನ್ನು ಮಾರಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ ಪರಾರಿಯಾದ ಘಟನೆ ಗುರುವಾರ ಸಂಜೆ ನಡೆದಿದೆ.

ತೀವ್ರ ರಕ್ತ ಸ್ರವಾದಿಂದ ಒದ್ದಾಡುತಿದ್ದ ಯುವತಿಯನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿಟ್ಟದರೂ ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿದ್ದಾಳೆ ಮೃತ ಯುವತಿಯನ್ನು ಕಕ್ಯಪದವು ನಿವಾಸಿ ಬಾಲಕೃಷ್ಣ ಗೌಡ ಎಂಬವರ ಪುತ್ರಿ ಲಾವಣ್ಯ   ಎಂದು ಗುರುತಿಸಲಾಗಿದೆ.

ಘಟನೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ

ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ನಿಖರ ಕಾರಣ ಮತ್ತು ಹಿನ್ನೆಲೆಯ ಕುರಿತು ತನಿಖೆ ಮುಂದುವರಿದಿದೆ.ಈ ಕೊಲೆಯು ಸ್ಥಳೀಯರಲ್ಲಿ ದಿಗ್ಬ್ರಮೆ ಮೂಡಿಸಿದ್ದು ಆತಂಕ ಹಾಗೂ ಆಕ್ರೋಶ ಮನೆಮಾಡಿದೆ



Leave a Comment