ಬಂಟ್ವಾಳ :ಶ್ರೀ ಕೃಷ್ಣ ಜನ್ಮೋತ್ಸವ ಸಮಿತಿ ಕೊಡ್ಮಾಣ್ ಇದರ ಆಶ್ರಯದಲ್ಲಿ ಪ್ರತಿ ವರ್ಷ ಜರಗುವ ಶ್ರೀಕೃಷ್ಣ ಲಿಲೋತ್ಸವ ಮೊಸರು ಕುಡಿಕೆ ಉತ್ಸವದ ಸಮಾಲೋಚನಾ ಸಭೆಯು ಇತ್ತೀಚೆಗೆ ಕೊಡ್ಮಾಣ್ ಶ್ರೀ ಶಾರದಾ ಭವನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಪ್ರಸ್ತುತ ವರ್ಷ ಮೊಸರು ಕುಡಿಕೆ ಉತ್ಸವದ ನೂತನ ಸಮಿತಿಯನ್ನು ರಚಿಸಲಾಯಿತು.
ಪದಾಧಿಕಾರಿಗಳ ವಿವರ :
ಅಧ್ಯಕ್ಷರಾಗಿ ಮಾಧವ ಕಾಂಜಿಲಕೋಡಿ, ಪ್ರಧಾನ ಕಾರ್ಯದರ್ಶಿ ನಿಶಾಂತ್ ಕಂಬಳ ಕೋಡಿ, ಕೋಶಾಧಿಕಾರಿ ಕಿರಣ್ ಪೊಡಿಕಲ, ಕ್ರೀಡಾ ಕಾರ್ಯದರ್ಶಿ ಚೇತನ್ ಕೊಟ್ಟಿoಜ, ಪವನ್ ಕುಮಾರ್ ಕೋಡಿ ಯವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು.
ಪ್ರಮುಖರಾದ ಮೇರಮಜಲು ಗ್ರಾ ಪo ನಿಕಟಪೂರ್ವ
ಅಧ್ಯಕ್ಷ ಸತೀಶ್ ನಾಯ್ಗ, ಕೊಟ್ಟಿoಜ ಶ್ರೀ ರಾಮ ಮಂದಿರದ ಗೌರವಾಧ್ಯಕ್ಷ ಪದ್ಮನಾಭ ಶೆಟ್ಟಿ ಕೊಟ್ಟಿoಜ, ಸಂತೋಷ್ ಕೊಡ್ಮಾಣ್, ರವೀಂದ್ರ ನಾಯ್ಕ್ ಪೊನ್ನೋಡಿ, ಕಾಂತಪ್ಪ ಕುಲಾಲ್ ಕೊಟ್ಟಿಂಜ, ರಮೇಶ್ ಬಂಗೇರ ಎಪೆದಗುರಿ, ಪ್ರವೀಣ್ ಶೆಟ್ಟಿ ಪಾಪೆದಡಿ , ಗೋಪಾಲ ಕುಲಾಲ್ ಗೋವಿoತೋಟ ಮತ್ತಿತರರು ಉಪಸ್ಥಿತರಿದ್ದರು.















