Coastal Bulletin

ರಚನೆ : ರಮ್ಯಾ ಅಶೋಕ್, ಪುತ್ತೂರು.

ಹೆಣ್ಣು


ಹೆಣ್ಣಿಗೂ ಇದೆ ಒಂದು ಮನಸ್ಸು

ಕಟ್ಟುವಳು ಅವಳು ಜೀವನದ ಬಗ್ಗೆ ಕನಸ್ಸು

ಹೇಳಿ ಹೆಣ್ಣೆಂದು ಜರಿವಿರಿಯೇತಕೆ

ಆಕೆಯು ಮಾಡಲಿಲ್ಲವೇ ಏನೂ  ಸಾಧನೆ...!?


ತಾಯಿಯಾಗಿ,ಅಕ್ಕ-ತಂಗಿಯಾಗಿ, ಮಡದಿಯಾಗಿ ನಿಭಾಯಿಸುವಳು ಕರ್ತವ್ಯ..

ತನ್ನ ತಪ್ಪಿಲ್ಲದಿದ್ದರೂ ಅವಳ ಜೊತೆಯಲ್ಲಿರುವುದು ಯಾವಾಗಲು ಭಯ.


ನಡೆಯಬೇಕು ಆಕೆ ಸಮಾಜಕ್ಕೆ ಅಂಜಿ

ಮಾತನಾಡುವಂತಿಲ್ಲ ಎಂದೂ ಮನಸ್ಸು ಬಿಚ್ಚಿ

ಪಾಪದ ಜೀವನದ ಮೇಲೆ ನಡೆಯುತ್ತಿದೆ ಅದೆಷ್ಟೂ ದೌರ್ಜನ್ಯ 

ದುಷ್ಟ ಮನುಜನೇ ನೀನೇಕೆ ಮರೆತಿರುವೆ ಸೌಜನ್ಯ. 

ಎಲ್ಲದಕ್ಕು ಹೆಣ್ಣನ್ನು ದೂಷಿಸುವುದಾದರೂ ಏತಕೆ

ಹೆಣ್ಣಾಗಿ ಹುಟ್ಟಿದ್ದು ಅವಳ

ತಪ್ಪೇ?

ನಾಲ್ಕು ಗೋಡೆಗಳ ಮಧ್ಯೆ ಕಣ್ಣೀರ ಗೋಳಾಟ ಎಲ್ಲರ ಮುಂದೆ ಧರಿಸುವಳು ನಗುವೆಂಬ ಮುಖವಾಡ 

ಅವಳ ಕೆಲಸಕ್ಕೆ ಸಿಗಲಿಲ್ಲವೆಂದೂ ರಜೆ

ಎಲ್ಲರಿಗೂ ಒಳ್ಳೆಯದಾಗಲಿ ಎಂದು ನೂರೆಂಟು ವೃತ್ತ- ಪೂಜೆ

ನಿನ್ನ ಜೀವನಕ್ಕೂ ಇದೆಯಲ್ಲಿ ಧಣಿವು-ಆಯಾಸ

ಸಮಯವಿಲ್ಲ ಯಾರಿಗೂ ಕೇಳಲು ಎನ್ನುವುದೇ ವಿಪರ್ಯಾಸ.

 

ಜೀವನಪೂರ್ತಿ ಹೊರುವಳು ನೂರಾರು ಜವಾಬ್ದಾರಿ 

ನಿರ್ಲಕ್ಷಿಸಿ ಆರೋಗ್ಯವನ್ನು, ರೋಗಗಳು ಬಂದು ಬಿಟ್ಟಿದೆ ಬೆನ್ನನೇರಿ

ಜೀವನವನ್ನೇ ಮಕ್ಕಳಿಗಾಗಿ ಮುಡಿಪಾಗಿಟ್ಟು ಸಾಕಿ ಸಲುಹಿದಳು 

ಆದರೆ ಕೊನೆಗೆ ಆಕೆ ಮಾತ್ರ ಕಂಡದ್ದು ಆಶ್ರಮದ ಬಾಗಿಲು.

ಜೀವನವೆಲ್ಲ ಮುಳುಗಿದ್ದವು ನೋವಿನಲ್ಲಿ 

ನೆಮ್ಮದಿಯಂತು ಸಿಗಲಿಲ್ಲ ಕೊನೆಗಾಲದಲ್ಲಿ

 ರಚನೆ: ರಮ್ಯಾ ಅಶೋಕ್

Leave a Comment